ಮಂಗಳೂರು: ನಗರದ ಹೊರವಲಯದ ಆಡುಮರೋಳಿ ಎಂಬಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬ್ಲೂ ವೇಲ್‌ ಗೇಮ್‌ ಶಂಕೆಯಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಡುಮರೋಳಿ ನಿವಾಸಿ ಪದ್ಮನಾಭ ಮತ್ತು ವಿಶಾಲಾ ದಂಪತಿಯ ಮಗ ಪ್ರಥಮ್‌ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ. ಶನಿವಾರ ಮಧ್ಯಾಹ್ನ ಮನೆಯ ಪಕ್ಕದಲ್ಲಿರುವ ಕಟ್ಟಡವೊಂದರ ಮೂರನೇ ಮಹಡಿಯಿಂದ ಜಿಗಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES  ಡಿಸೆಂಬರ್ 15 ರಿಂದ ಶಾಲೆಗಳು ರೀ ಓಪನ್? ನಡೆದಿದೆ ಚರ್ಚೆ

ಓದಿನಲ್ಲಿ ಹಿಂದುಳಿದಿರುವ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿರುವ ಪತ್ರವೊಂದು ಆತನ ಬಳಿ ಸಿಕ್ಕಿದೆ. ಆದರೆ, ಕೆಲವು ದಿನಗಳಿಂದ ಈ ವಿದ್ಯಾರ್ಥಿ ಪಕ್ಕದ ಕಟ್ಟಡದಲ್ಲಿ ತಾಲೀಮು ನಡೆಸುತ್ತಿರುವುದನ್ನು ನೋಡಿರುವುದಾಗಿ ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಬ್ಲೂ ವೇಲ್‌ ಗೇಮ್‌ ಆಡುತ್ತಾ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂಬ ಶಂಕೆಯಿಂದ ಕಂಕನಾಡಿ ನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES  ಪಾಕಿಸ್ಥಾನ ಭಾರತಕ್ಕೆ 2.86 ಲಕ್ಷ ಬಿಲ್ ಕೊಟ್ಟಿದ್ದು ಯಾಕೆ ಗೊತ್ತಾ?