ಅಂಕೋಲಾ: ತಾಲೂಕಿನ ರಾ.ಹೆ.66ರ ಕೊಡಣಿ-ಶಿರೂರು ಸಮೀಪ ಚಿರತೆಯೊಂದು ಮೃತಪಟ್ಟಿದೆ. ಒಂದೂವರೆ ವರ್ಷದ ಹೆಣ್ಣು ಚಿರತೆ ಯಾವುದೋ ವಾಹನಕ್ಕೆ ಸಿಲುಕಿ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆಯವರು ಶಂಕೆ ವ್ಯಕ್ತಪಡಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಜಿ.ವಿ.ನಾಯಕ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಕಳೆಬರಹ ಪಶು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ, ನ್ಯಾಯಾಲಯದ ಅನುಮತಿ ಮೇರೆಗೆ ಅಂತ್ಯ ಸಂಸ್ಕಾರ ನಡೆಸಿದರು. ಈ ಸಂದರ್ಭದಲ್ಲಿ ಡಿಆರ್‌ಎಫ್‌ಓ ಆರ್.ಎಚ್.ನಾಯ್ಕ, ಮಹೇಶ, ಬೀಟ್ ಫಾರೆಸ್ಟ್ ಶಿವಾಜಿ, ರಾಠೋಡ ಇತರರಿದ್ದರು.