ಅಂಕೋಲಾ: ಶಿಕ್ಷಕಿಯೋರ್ವಳು ಕಾಲು ಜಾರಿ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ತಾಲೂಕಿನ ಹೊಸ್ಕೇರಿಯಲ್ಲಿ ಸಂಭವಿಸಿದೆ. ಹೊಸ್ಕೇರಿ ಬಿಳಿಗಿರಿಯಮ್ಮ ದೇವಾಲಯದ ಸಮೀಪದ ನಿವಾಸಿ ಲಕ್ಷ್ಭೀ ನಾರಾಯಣ ಪಟಗಾರ (54) ಮೃತ ಮಹಿಳೆಯಾಗಿದ್ದು ಪಟ್ಟಣದ ಅಜ್ಜಿಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಇತ್ತೀಚಿನ ಕೆಲವು ದಿನಗಳಿಂದ ಸಕ್ಕರೆ ಕಾಯಿಲೆ ಉಲ್ಬಣಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ( ಇ ಎಲ್ )ರಜೆಯ ಮೇಲೆ ಮನೆಯಲ್ಲೇ ಇದ್ದರು.

RELATED ARTICLES  ಮಾರುಕಟ್ಟೆಗೆ ಬಂದಿದೆ 3 ಚಕ್ರದ ಯಮಹಾ ಬೈಕ್!

ಶುಕ್ರವಾರ ಮಧ್ಯಾಹ್ನ ಯಾವುದೋ ಕಾರಣದಿಂದ ಪಕ್ಕದ ಮನೆಯ ಬಾವಿಯ ಬಳಿ ಹೋದವರು ಕಾಲು ಜಾರಿ ಬಾವಿಗೆ ಬಿದ್ದು ಮೃತ ಪಟ್ಟಿರುವುದಾಗಿ ಹೇಳಲಾಗುತ್ತಿದೆ.ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಮೃತದೇಹವನ್ನು ಬಾವಿಯಿಂದ  ಮೇಲೆತ್ತಿದ್ದರು. ಘಟನೆ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು  ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಸನ್ಮಾನ