ಶಿರಸಿ:ತಾಲೂಕಿನ ಮಂಡೆಮನೆಯಲ್ಲಿ ಮದುವೆಗೆ ಕರೆಯುವ ನೆಪದಲ್ಲಿ ಚಾಕು ತೋರಿಸಿ ಮನೆ ಕಳ್ಳತನ ಮಾಡಲು ಯತ್ನ ನಡೆದಿರುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದಾಗಿ ಹೇಳಿ ಬಾಗಿಲು ತಟ್ಟಿದ್ದು, ಮನೆಯವರು ಬಾಗಿಲು ತೆಗೆದಾಗ ಮನೆಗೆ ನುಗ್ಗಿ ಬಳಿಕ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದು, ಕಳ್ಳತನಕ್ಕೆ ಯತ್ನಿಸಿದ್ದಾನೆ.
ವಿಡಿಯೋ ನೋಡಿ.
ಈ ವೇಳೆ ಚಾಕುವಿನಿಂದ ಮನೆಯ ಯಜಮಾನನ ಮೇಲೆ ಹಲ್ಲೆ ನಡೆಸಿದ್ದು ಅವರ ಕೈಗೆ ಗಾಯವಾಗಿದೆ. ಈ ಗಲಾಟೆ ಕೇಳಿ ಅವರ ಮಗ ಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಬಂದಿದ್ದು, ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ. ಕಳ್ಳ ಮನೆಗೆ ಬಂದು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮನೆ ಮಾಲೀಕ ಶಿರಸಿ ಗ್ರಾಮೀಣ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.