ಹೊನ್ನಾವರ : ತಾಲೂಕಿನ ಚಂದಾವರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬ್ರಿಜ್ ಕೆಳಗಡೆ ಬಿದ್ದ ಘಟನೆ ಸಂಭವಿಸಿದೆ. ಹೊನ್ನಾವರ ತಾಲೂಕಿನ ಚಂದಾವರ ಸಮೀಪವಿರುವ ಟೇಬ್ರಿ ಹಳ್ಳದ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ.

RELATED ARTICLES  ಕಣ್ಣೆದುರೇ ನಡೀತು ಬಸ್ ಅಪಘಾತ : ಊಟ ಬಿಟ್ಟು ಜನರ ಆರೈಕೆ ಮಾಡಿದ ವೈದ್ಯ ದಂಪತಿಗಳು.

ದಾರೇಶ್ವರದಿಂದ ಚಂದಾವರ ಮಾರ್ಗವಾಗಿ ಸಾಗರ ತೆರಳುವ ವೇಳೆ ಈ ಅವಘಡ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸೇತುವೆಗೆ ತಡೆಗೋಡೆ ಇಲ್ಲದಿರುವುದು ಇಂತಹ ಹಲವು ಅಫಘಾತಗಳಿಗೆ ಆವ್ಹಾನ ನಿಡುತ್ತಿದ್ದು, ತಡೆಗೋಡೆ ನಿರ್ಮಿಸುವಂತೆ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

RELATED ARTICLES  ಗ್ರೂಪ್ ಚಾಟ್ ಗಳಲ್ಲಿ 'ರಿಪ್ಲೆ ಪ್ರೈವೆಸಿ' ಆಯ್ಕೆಯನ್ನು ತಪ್ಪಾಗಿ ಸಕ್ರಿಯಗೊಳಿಸಿದ ವಾಟ್ಸ್ ಅಪ್!

ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.