ಹೊನ್ನಾವರ :ಪಟ್ಟಣದ ವೈನ್ ಶಾಪ್ ಆವರಣದಲ್ಲಿ ಗಾಜಿನಿಂದ ಚುಚ್ಚಿ ಕೊಲೆಗೈದ ಆರೋಪಿಯನ್ನು ಹೊನ್ನಾವರ ಪೋಲೀಸರು ಕೆಲವೇ ಗಂಟೆಯಲ್ಲಿ ಹಿಡಿಯುವ ಮೂಲಕ ಉತ್ತಮ ಕಾರ್ಯಮಾಡಿದ್ದಾರೆ.

ಲಕ್ಷ್ಮಿನಾರಾಯಣ ಮೆಸ್ತಾ ಬಂಧಿತ ಆರೋಪಿಯಾಗಿದ್ದಾನೆ.ಮಂಜುನಾಥ ನಾಯಕ ಕೊಲೆಯಾಗಿದ್ದ ವ್ಯಕ್ತಿಯಾಗಿದ್ದು. ಮಂಜುನಾಥ ಎಂಬಾತನ್ನು ಹೊನ್ನಾವರದ ವೈನ್ ಶಾಪ್ ಎದುರು ಕೊಲೆ ಆಗಿದ್ದ ರೀತಿಯಲ್ಲಿ ಮಂಜುನಾಥ ನಾಯಕನ ಮೃತ ದೇಹ ಬಿದ್ದಿತ್ತು. ಈ ಬಗ್ಗೆ ಮಂಜುನಾಥನ ಹೆಂಡತಿ ತನ್ನ ಗಂಡನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

RELATED ARTICLES  ಕುಮಟಾದಲ್ಲಿ "ಮಾನವಂತರ ಮನೆ" ನಾಟಕ ಪ್ರದರ್ಶನ ನ.೧೧ ರಿಂದ.

ಕೊಲೆಯಾದ ಮಂಜುನಾಥ ಕೆಎಸ್ಆಟಿಸಿ ಡಿಪೋದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ.

ತನಿಖೆಯ ಬೆನ್ನುಹತ್ತಿದ ಕುಮಟಾ ಸಿಪಿಐ ಸಂತೋಷ ಶೆಟ್ಟಿ ಮತ್ತು ಪಿಎಸ್ಐ ಆನಂದ ಮೂರ್ತಿ ಇದೀಗ ಕೊಲೆ ಆರೋಪಿಯನ್ನು ಇಪ್ಪತ್ತನಾಲ್ಕು ಗಂಟೆಯಲ್ಲಿ ಬಂಧಿಸಿದ್ದು ವಿಚಾರಣೆ ವೇಳೆ ಲಕ್ಷ್ಮಿನಾರಾಯಣ ಕೊಲೆ ಮಾಡಿರೋದು ತಾನೆ ಎಂದು ಒಪ್ಪಿ ಕೊಂಡಿದ್ದಾನೆ ಎಂದು ಹೇಳಲಾಗಿದೆ.

RELATED ARTICLES  ಗೇರು ಸಂಸ್ಕರಣ ಘಟಕ ನಿರ್ಮಿಸಲು ವಿರೋಧ: ಶಾಸಕರಿಗೆ ಮನವಿ ಸಲ್ಲಿಸಿದ ಹಳದೀಪುರದ ಕುದಬೈಲ ಹಾಗೂ ಇಂದಿರಾನಗರದ ನಿವಾಸಿಗಳು.

ವೈನ್ ಶಾಪ್ ಮಾಲೀಕ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದ್ದು, ಆತ ಈಗ ತಲೆಮರೆಸಿಕೊಂಡಿದ್ದು. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.