ಕುಮಟಾ : ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಮಾನ್ಯ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಮಾನ್ಯ ಸಿದ್ದರಾಮಯ್ಯ ಅವರ ಹಸ್ತಾಕ್ಷರವಿರುವ ಪತ್ರವನ್ನು ಬೂತ್ ಮಟ್ಟದಲ್ಲಿ ವಿತರಿಸುವ ಕುರಿತು ಕೆಪಿಸಿಸಿ ಹಾಗೂ ಡಿಸಿಸಿ ನಿರ್ದೇಶನದಂತೆ ಇಂದು ಕುಮಟಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿ.ಎಲ್.ನಾಯ್ಕ, ಇತರ ಮುಖಂಡರ ಹಾಗೂ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಮಾಜಿ ಶಾಸಕಿ ಶ್ರೀಮತಿ ಶಾರದಾ ಮೋಹನ ಶೆಟ್ಟಿಯವರು ಮಾತನಾಡಿ, ನಮ್ಮ ಕಾಂಗ್ರೆಸ್ ಪಕ್ಷವು ಬಡವರ ಪರ ಕಾಳಜಿಯುಳ್ಳ ಪಕ್ಷವಾಗಿದೆ. ಇಂದು ಬಿಜೆಪಿ ನೇತೃತ್ವದ ಸರ್ಕಾರದ ಬೃಷ್ಠಾಚಾರ ಹಾಗೂ ಬೆಲೆಯೇರಿಕೆಯಿಂದಾಗಿ ಜನಜೀವನ ದುಸ್ಥರವಾಗಿದೆ. ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ನೀಡುವ ಗೃಹಲಕ್ಷ್ಮಿ ಹಾಗೂ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗಳನ್ನು ಖಡಾಖಂಡಿತವಾಗಿ ಜಾರಿಮಾಡುವ ಸಲುವಾಗಿ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಕೆಪಿಸಿಸಿ ಅಧ್ಯಕ್ಷರ ಹಾಗೂ ಮಾಜಿ ಮುಖ್ಯಮಂತ್ರಿಗಳ ಹಸ್ತಾಕ್ಷರವಿರುವ ಈ ಗ್ಯಾರಂಟಿ ಪತ್ರಗಳನ್ನು ಪ್ರತಿಯೊಂದು ಕುಟುಂಬಗಳಿಗೆ ಪಕ್ಷದ ಕಾರ್ಯಕರ್ತರು ತಲುಪಿಸಿ, ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಶ್ರಮವಹಿಸಬೇಕಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ ಮುಖಂಡರಾದ ರತ್ನಾಕರ ನಾಯ್ಕ, ಮಧುಸೂಧನ್ ಶೇಟ್, ಶ್ರೀಮತಿ ಸುರೇಖಾ ವಾರೇಕರ್, ಶ್ರೀಮತಿ ಗಾಯತ್ರಿ ಗೌಡ, ಶಂಕರ್ ಅಡಿಗುಂಡಿ, ಮುಜಾಫರ್ ಸಾಬ್, ಹನುಮಂತ ಪಟಗಾರ, ಅರುಣ್ ಗೌಡ, ಅಶೋಕ ಗೌಡ, ಎಂ.ಟಿ.ನಾಯ್ಕ, ಚಂದ್ರಹಾಸ ನಾಯಕ, ಶ್ರೀಮತಿ ವೀಣಾ ನಾಯಕ, ಗಜಾನನ ನಾಯ್ಕ, ಶಶಿಕಾಂತ ನಾಯ್ಕ, ಜಗದೀಶ್ ಹರಿಕಂತ್ರ, ಫ್ರಾನ್ಸಿಸ್ ಫರ್ನಾಂಡಿಸ್, ಗಜಾನನ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಘಟಕಾಧ್ಯಕ್ಷರುಗಳು, ವಿವಿಧ. ಸೆಲ್ ಅಧ್ಯಕ್ಷರು, ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತ್ , ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಿರಿಯ ಕಿರಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.