ಹೊನ್ನಾವರ : ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಕಾಂಗ್ರೆಸ್ ಪಕ್ಷ ಜಾರಿಯಲ್ಲಿ ತರಲು ಉದ್ದೇಶಿಸಿರುವ ಗೃಹ ಲಕ್ಮೀ ಮತ್ತು ಗೃಹ ಜ್ಯೋತಿ ಯೋಜನೆಯ ಗ್ಯಾರಂಟಿ ಕಾರ್ಡ ವಿತರಣೆಯ ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಚಾಲನೆ ನೀಡಿ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಎಂ.ಎನ್.ಸುಬ್ರಮಣ್ಯಾ, ಬ್ಲಾಕ್ ಉಪಾಧ್ಯಕ್ಷ ದಾಮೋದರ ನಾಯ್ಕ, ಶ್ರೀಮತಿ ಲಿಲ್ಲಿ ಪರ್ನಾಂಡಿಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಸೇವಾದಳದ ಅಧ್ಯಕ್ಷ ಮೋಹನ್ ಆಚಾರಿ,ನಗರ ಘಟಕಾಧ್ಯಕ್ಷ ಚಂದ್ರಶೇಖರ ಚಾರೋಡಿ, ಪ್ರಮುಖರಾದ ಕೃಷ್ಣ ಮಾರಿಮನೆ,ಯಶ್ವಂತ ನಾಯ್ಕ,ರವಿ ಪಟಗಾರ,ಮಾಧೇವ ಕರ್ಕಿ, ನಾಗೇಶ ಸಾಲ್ಕೋಡ, ಬ್ರೆಜಿಲ್ ಪಿಂಟೊ,ಸುರೇಶ ಮೇಸ್ತ,ಜ್ಯೋತಿ ಮಹಾಲೆ, ಪಾತ್ರೊನ್,ನೆಲ್ಸನ್,ಮಂಜು ಹಳದೀಪುರ,ಮಮತಾ ಶೇಟ,ಮಾರಿಯಾ,ಪಾರೂಕ್ ಶೇಖ,ಚಂದ್ರು ಚಂದಾವರ,ವಿನಯ ನಾಯ್ಕ,ಮಹೇಶ ಹಳದೀಪುರ, ಮಾದೇವ ಹೊದ್ಕೆ,ಶಂಕರ ಮೇಸ್ತ, ರಮೇಶ,ಹನೀಪ್ ಶೇಖ,ಮನ್ಸೂರಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶ್ರೀಮತಿ ಶಾರದಾ ಶೆಟ್ಟಿಯವರ ಜೊತೆಗೂಡಿ ಹೊನ್ನಾವರ ಪಟ್ಟಣದ ಕಿಂತಲಕೇರಿ ಯಲ್ಲಿರುವ ಹಲವಾರು ಮನೆಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡನ್ನು ವಿತರಿಸಿದರು.