ಭಟ್ಕಳ : ತಾಲ್ಲೂಕಿನ ಶಿರಾಲಿ ಚೆಕ್ ಪೋಸ್ಟ್ ಸಮೀಪ ಅಕ್ರಮವಾಗಿ ಹಣ್ಣಿನ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುವ ವೇಳೆ ವಾಹನ ತಡೆದು ಚಾಲಕನನ್ನು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮಹ್ಮದ ಸಲಿಂ ಎಂದು ತಿಳಿದು ಬಂದಿದೆ. ಈತ ಹಾನಗಲ್ ಕಡೆಯಿಂದ ಭಟ್ಕಳ ಕಡೆಗೆ ಎಲ್ಲಿಯೋ ಜಾನುವಾರುವನ್ನು ವಧೆ ಮಾಡಿಕೊಂಡು ನೀಲಿ ಬಣ್ಣದ ಟಾಟಾ ಇಂಟ್ರಾ ವಾಹನದಲ್ಲಿ 15 ಸಾವಿರ ಮೌಲ್ಯದ 60 ಕೆಜಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ತುಂಬಿಕೊಂಡು ಸಾಗಾಟ ಮಾಡಲು ಪರವಾನಿಗೆ ಇಲ್ಲದೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ವಾಹನವನ್ನು ತಡೆದು ಚಾಲಕನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.