ಕುಮಟಾ: ಕೂಲಿ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿ 2 ವರ್ಷ ಕಳೆದರೂ ಸಹ ಮನೆಗೂ ಬಾರದೇ, ಕೆಲಸ ಮಾಡುವ ಸ್ಥಳದಲ್ಲಿಯೂ ಇರದೇ ಇರುವ ಕಾರಣ ಕಾಣೆಯಾದ ವ್ಯಕ್ತಿಯನ್ನು ಹುಡುಕಿಕೊಡುವಂತೆ ಕುಟುಂಬಸ್ಥರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕುಮಟಾ ತಾಲೂಕಿನ ಮೂರೂರು ಗ್ರಾಮದ ನೆಲ್ಲಿಕೇರಿಯ 52 ವರ್ಷ ವಯಸ್ಸಿನ ನಾರಾಯಣ ಹುಲಿಯಪ್ಪ ಗೌಡ ಇತನು ಮೊದಲಿನಿಂದಲೂ ಶಿರಸಿಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವನಾಗಿದ್ದು, ಕುಮಟಾದಿಂದ ಶಿರಸಿಗೆ ತೆರಳಿ ಸುಮಾರು 3 ತಿಂಗಳುಗಳ ಕಾಲ ಕೆಲಸ ಮಾಡಿ ಮನೆಗೆ ಬಂದು ಹೋಗುತ್ತಿದ್ದ. ಆದರೆ 2019 ರ ಡಿಸೆಂಬರ್ 17 ರಂದು ಕೂಲಿ ಕೆಲಸಕ್ಕೆಂದು ಮನೆಯಿಂದ ಶಿರಸಿಗೆ ಹೋದವನು ಈ ವರೆಗೆ ಮರಳಿ ಮನೆಗೆ ಬಂದಿಲ್ಲವಾಗಿದ್ದು ಕೆಲಸ ಮಾಡಲು ತೆರಳಿದ ಮನೆಯಲ್ಲಿ ವಿಚಾರಿಸಿದರೂ ಯಾವುದೇ ವಿಚಾರ ತಿಳಿಯದಾಗಿದೆ.

RELATED ARTICLES  52 ರ ಮದುಮಗ 16 ರ ಮದುಮಗಳು..!

ನಾರಾಯಣ ಹುಲಿಯಪ್ಪ ಗೌಡ ಅಂದು ಬರುಬಹುದು ಇಂದು ಬರಬಹುದು ಎಂದು ಕಾದ ಕುಟುಂಬಸ್ಥರು ವರ್ಷಗಳೇ ಕಳೆದರೂ ಕೂಡ ಮನೆಗೆ ಬಾರದೇ ಇರುವ ನಿಟ್ಟಿನಲ್ಲಿ ಕುಮಟಾ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ನಾರಾಯಣ ಹುಲಿಯಪ್ಪ ಗೌಡ ಇತನನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ. ಇತನ ಗುರುತು ಸಿಕ್ಕಲ್ಲಿ ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

RELATED ARTICLES  ದೇವಸ್ಥಾನಕ್ಕೆ ಹೋಗವಾಗ ಬಾಳೆಹಣ್ಣು ಮತ್ತು ತೆಂಗಿನಕಾಯಿ ಯಾಕೆ ತಗೊಂಡ್ ಹೋಗ್ತಿವಿ ಗೊತ್ತಾ ?