ಶಿರಸಿ: ನಗರದಲ್ಲಿ ಬೇಡರವೇಷ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಈ ನಡುವೆ ಭಾನುವಾರ ರಾತ್ರಿ ಚಿಕ್ಕಮಕ್ಕಳು ಪ್ರದರ್ಶಿಸಿದ ಬೇಡರವೇಷ ನೆರೆದ ಸಾವಿರಾರು ಜನರ ಹುಬ್ಬೇರಿಸುವಂತೆ ಮಾಡಿತ್ತು. ನಗರದ ಗಣೇಶ ನಗರದಲ್ಲಿ 6 ರಿಂದ 14 ವರ್ಷದ ಮಕ್ಕಳೇ ತಮ್ಮಲ್ಲಿಯೇ ಬೇಡರ ವೇಷ ಸಮಿತಿ ರಚಿಸಿಕೊಂಡು ನಿರಂತರ 3ನೇ ಬಾರಿಗೆ ಬೇಡರ ವೇಷವನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಬೇಡರ ವೇಷಧಾರಿಯಾಗಿ ಸಮಯ ಮಹಾಲೆ ಅದ್ಭುತವಾಗಿ ಹೆಜ್ಜೆ ಹಾಕುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಸಮಿತಿಯಲ್ಲಿ ರಿತೀಶ್, ಐಶ್ವರ್ಯ, ರೀತೇಶ್, ಅನಿಕೇತ, ಗಗನ್ ಮುಂತಾದವರು ಇದ್ದಾರೆ.