ಕುಮಟಾ: ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ ರಾಮನಗರದ ಮನೆಯೊಂದರ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯನ್ನು ಅಗ್ನಿ ಶಾಮಕ ದಳ ರಕ್ಷಿಸಿದೆ. ಪಟ್ಟಣದ ರಾಮನಗರ ನಿವಾಸಿ ಹರೀಶ ರಮೇಶ ಕಾಮತ (44) ಎಂಬುವವರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ತಕ್ಷಣ ಮನೆಯವರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಯು ಬಾವಿಯಲ್ಲಿ ಇಳಿದು ಕಾರ್ಯಾಚರಣೆ ನಡೆಸುವ ಮೂಲಕ ಹರೀಶ ಕಾಮತ್ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾದರು.

RELATED ARTICLES  ನವಜಾತ ಶಿಶುವಿನ ಪಾಲಕರು ಸಂಪರ್ಕಿಸಿ.

ಬಾವಿಯಲ್ಲಿ ಬಿದ್ದಿದ್ದರಿಂದ ಅಸ್ವಸ್ಥಗೊಂಡ ಹರೀಶ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಇವರ ರಕ್ಷಣೆ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಯಾದ ಸಂದೀಪ ನಾಯಕ, ರಾಜೇಶ ನಾಯಕ, ಮಂಜುನಾಥ ಹೆಗಡೆ, ಚಂದ್ರ ಮೊಗೇರ, ಗುರುನಾಥ ನಾಯ್ಕ, ಚಂದ್ರಶೇಖರ ಗೌಡ ಮುಂತಾದವವರು ಪಾಲ್ಗೊಂಡಿದ್ದರು.

RELATED ARTICLES  ಪೊಲೀಸ್ ದಾಳಿ ನಗದು ವಶ : ಇನ್ನೊಂದೆಡೆ ಅಪಾರ ಪ್ರಮಾಣದ ಮದ್ಯ ವಶ.