ಕಾರವಾರ : ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದಲ್ಲಿ ಮಂಜುನಾಥ ಎನ್ನುವವರ ಮನೆಯಲ್ಲಿ ಏಕಕಾಲದಲ್ಲಿ 3 ನಾಗರ ಹಾವುಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ. ಹಾವುಗಳನ್ನ ಕಂಡು ಭಯಭೀರಾಗಿದ್ದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಮತ್ತು ಉಪವಲಯ ಅರಣ್ಯ ಅಧಿಕಾರಿ ಆನಂದ ಬಜರಂಗ್ ಭೇಟಿ ನೀಡಿ, 3 ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿನಲ್ಲಿ ಒಂದೇ ಸ್ಥಳದಲ್ಲಿ ಬಿಟ್ಟುಬಂದಿದ್ದಾರೆ.
ಕಳೆದ 26 ದಿನಗಳಲ್ಲಿ ಅರಣ್ಯ ಇಲಾಖೆಯ ಉರಗ ರಕ್ಷಕ ಬಿಲಾಲ್ ಶೇಖ್ ಅವರು ಕದ್ರಾ ವಲಯದ ಮಲ್ಲಾಪುರದ ವಿವಿಧ ಮನೆಗಳಲ್ಲಿ ಒಟ್ಟು 6 ನಾಗರ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಅವುಗಳ ಆವಾಸಕ್ಕೆ ಬಿಟ್ಟಿದ್ದಾರೆ.
ಒಂದೇ ಮನೆಯಲ್ಲಿ ರಕ್ಷಿಸಿದ 3 ನಾಗರ ಹಾವುಗಳಲ್ಲಿ ಒಂದು ಹೆಣ್ಣು, ಇನ್ನುಳಿದ ಎರಡು ಗಂಡು ಹಾವುಗಳಾಗಿದ್ದವು. ಇದು ನಾಗಗಳ ಮಿಲನ ಋತುವಾಗಿರುವುದರಿಂದ ಒಂದು ಹೆಣ್ಣು
ನಾಗವಿರುವ ಸ್ಥಳದಲ್ಲಿ ಎರಡರಿಂದ ಮೂರು ಗಂಡು ನಾಗಗಳಿರುವುದು ಸಾಮಾನ್ಯ ಎನ್ನುವುದು ತಜ್ಞರ ಮಾತಾಗಿದೆ.