ಶಿರಸಿ: ರಾಜ್ಯದ ಪ್ರತಿಷ್ಠಿತ ಟಿ.ಸುನಂದಮ್ಮ ಸ್ಮಾರಕ ಪ್ರತಿಷ್ಠಾನ ನೀಡುವ ೨೦೨೨ನೇ ಸಾಲಿನ ಟಿ ಸುನಂದಮ್ಮ ಪ್ರಶಸ್ತಿಗೆ ನಾಡಿನ ಹೆಸರಾಂತ ಸಾಹಿತಿ ಭುವನೇಶ್ವರಿ ಹೆಗಡೆ ಆಯ್ಕೆ ಆಗಿದ್ದಾರೆ. ಮಾ.೧೮ರಂದು ಸಂಜೆ ೫ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಹೆಸರಾಂತ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಅವರು ಪ್ರದಾನ ಮಾಡಲಿದ್ದಾರೆ.
ಇದೇ ವೇಳೆ ಹಾಸ್ಯ ಬರಹಗಾರ ದುಂಡಿರಾಜ್ ಅವರ ಟಿ.ಸುನಂದಮ್ಮ ಸಾಹಿತ್ಯ ಸಂಪುಟ ೩ ಹಾಗೂ ಹಿರಿಯ ಲೇಖಕಿ ಎಲ್.ವಿ.ಶಾಂತಕುಮಾರಿ ಅವರು ನಾನು ಕಂಡಂತೆ ಟಿ.ಸುನಂದಮ್ಮ ಕೃತಿ ಬಿಡುಗಡೆಗೊಳಿಸಲಿದ್ದಾರೆ.
ಭುವನೇಶ್ವರಿ ಹೆಗಡೆ ಅವರು ವಾಗ್ಮಿಯಾಗಿ, ಹಾಸ್ಯ ಲೇಖಕಿಯಾಗಿ ಪರಿಚಿತರು. ಹಾಗೂ ಮೂಲತಃ ಉತ್ತರ ಕನ್ನಡದವರು ಎಂಬುದು ಉಲ್ಲೇಖನೀಯ.