ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗೆ ಕಾಯ್ದಿರಿಸಿದ್ದ ಜಮೀನಿನಲ್ಲಿ 15-35-00 ಕ್ಷೇತ್ರವನ್ನು ಹಿಂದಕ್ಕೆಪಡೆದು ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಿಂದಿರುಗಿಸುವ ಕುರಿತ ಪ್ರಸ್ತಾವನೆಯಯನ್ನು ಅನುಮೋದಿಸಿದ ಸರ್ಕಾರವು, ಕುಮಟಾ ಗ್ರಾಮದ ಸರ್ವೆ ನಂ. 440 ಅ/ಬ ರ ಪೈಕಿ ಕ್ಷೇತ್ರ 17-14ನ್ನು ಏಕಲವ್ಯ ಮಾದರಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಕಾಯ್ದಿರಿಸಿರುವ ಜಮೀನಿನ ಪೈಕಿ 15-35 ಜಮೀನನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹಿಂದಿರುಗಿಸುವ ಷರತ್ತಿಗೊಳಪಟ್ಟು ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳು ಉತ್ತರಕನ್ನಡ ಜಿಲ್ಲೆ ಇವರಿಗೆ ಹಂಚಿಕೆಮಾಡಿ ಆದೇಶಿಸಿದೆ.

RELATED ARTICLES  ಚಾನಲ್ ಹೆಸರು ಹೇಳಿ ಜನರನ್ನು ವಂಚಿಸುತ್ತಿದ್ದ ಹೊನ್ನಾವರದ ವ್ಯಕ್ತಿ ಈಗ ಪೋಲೀಸರ ಅತಿಥಿ!

ಇದಕ್ಕೆ ಕಾರಣೀಕರ್ತರಾದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಆಗಿರುವ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಾನ್ಯ ದಿನಕರ ಶೆಟ್ಟಿಯವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

RELATED ARTICLES  50ಕ್ಕೂ ಹೆಚ್ಚು ಜನರು ಸೇರಿದ್ದ ಮದುವೆ ಸಮಾರಂಭವೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು