ಕುಮಟಾ : ತಾಲೂಕಿನ ಜನವಸತಿ ಪ್ರದೇಶಗಳಲ್ಲಿ ಒಂದಾದ ವಿವೇಕನಗರದಲ್ಲಿ ಅಡ್ಡರಸ್ತೆಗಳಿಗೆ ನಾಮಫಲಕಗಳು ಇಲ್ಲದ ಕಾರಣ ಮನೆ ಗುರುತಿಸಲು ಕಷ್ಟವಾಗುತ್ತಿದ್ದ ಸಮಸ್ಯೆಯನ್ನು ಅರಿತು ವಿವೇಕನಗರ ವಿಕಾಸ ಸಂಘದ ಸದಸ್ಯರು ವಿವೇಕ ನಗರದ ಅಡ್ಡ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಮೂಲಕ ಮಾದರೀ ಕಾರ್ಯ ಮಾಡಿದರು.

ಇಂದು ಕುಮಟಾ ಹೆಗಡೆ ಮಾರ್ಗದಲ್ಲಿ ವಿವೇಕನಗರದ ಮೊದಲನೇ ಅಡ್ಡರಸ್ತೆಯ ನಾಮಫಲಕವನ್ನು ನಿವೃತ್ತ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್.ಟಿ ಹೆಗಡೆ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು ಕುಮಟಾದ ವಿವೇಕ ನಗರ ಹೆಚ್ಚಿನ ಜನ ವಸತಿ ಹೊಂದಿದ ಪ್ರದೇಶವಾಗಿದ್ದು, ಇಲ್ಲಿ ಹೊರಗಿನಿಂದ ಬರುವ ಅತಿಥಿಗಳು ಮನೆಯ ವಿಳಾಸ ಹೇಳಿದರೂ ಮನೆಯನ್ನು ಗುರುತಿಸಲು ಕಷ್ಟವಾಗುತ್ತಿತ್ತು. ಅಂಚೆ ಪತ್ರಗಳು ಮನೆ ತಲುಪಲು ಗೊಂದಲವಾಗುತ್ತಿತ್ತು ಇದನ್ನು ಅರಿತ ವಿವೇಕ ನಗರ ವಿಕಾಸ ಸಂಘದವರು ಈ ರೀತಿಯ ಗುರುತುಕಲ್ಲುಗಳನ್ನು ಅಳವಡಿಸಿ ಜನಾನುಕೂಲವಾದ ಕೆಲಸ ಮಾಡಿದ್ದಾರೆ. ಮಣಕಿ ಮಾನೀರು ಗ್ರಾಮದಲ್ಲಿರುವ ಸ್ಥಳ, ದುರ್ಗಾಂಬಾ ದೇವಿಯ ಆಶೀರ್ವಾದದಿಂದ ಈ ಸ್ಥಳ ಉನ್ನತಿ ಕಾಣುತ್ತಲಿದೆ. ಈ ಸಂಘಟನೆ ಜನರಿಗೆ ಅನುಕೂಲವಾಗುವ ಆರೋಗ್ಯ ಶಿಬಿರ ಹಾಗೂ ಸ್ವಚ್ಚತಾ ಕಾರ್ಯಗಳನ್ನು ಮಾಡುತ್ತಿರುವುದು ಸಂತಸದ ವಿಚಾರ. “ಸಂಘೇ ಶಕ್ತಿ ಕಲಿಯುಗೆ” ಎಂಬ ಮಾತು ಸತ್ಯವಾದದ್ದು, ಸಂಘಟನೆಯಿಂದ ಎಲ್ಲವನ್ನು ಸಾಧಿಸಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಿವಿಎಸ್‌ಕೆ ವಿದ್ಯಾರ್ಥಿಗಳು

ಸಂಘದ ಅಧ್ಯಕ್ಷರಾದ ಡಾ. ಎಂ ಆರ್ ನಾಯಕ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ ಸ್ವಾಗತಗೈದರು. ಸಂಘದ ನಿರ್ದೇಶಕರಾದ ಜಯದೇವ ಬಳಗಂಡಿ ನಿರೂಪಿಸಿದರು. ಕಾರ್ಯದರ್ಶಿ ಡಾ.ಡಿ.ಡಿ.ಭಟ್ಟ, ಖಜಾಂಚಿ ವಿ.ವಿ.ಹೊಸಕಟ್ಟಾ, ನಿರ್ದೇಶಕರುಗಳಾದ ಅರುಣ ಹೆಗಡೆ, ಆರ್.ಎನ್.ಪಟಗಾರ, ಸಂಜಯ ಪಂಡಿತ, ಸೀತಾರಾಮ ಗುನಗ, ಕಾಮೇಶ್ವರ ಭಟ್ಟ,
ಮಹಾಬಲೇಶ್ವರ ಶೇಟ್, ಕೆ.ಎಸ್.ಭಟ್ಟ ಹಾಜರಿದ್ದರು.

RELATED ARTICLES  ಕಾಂಗ್ರೆಸ್ ಚುನಾವಣಾ ಪ್ರಚಾರ ಬಿರುಸು; ಇಂದು ಹಲವೆಡೆ ಪ್ರಚಾರ ನಡೆಸಿದ ಶಾರದಾ ಮೋಹನ‌ ಶೆಟ್ಟಿ