ಅಂಕೋಲಾ: ತಾಲೂಕಿನ ಹಾಲಕ್ಕಿ ಸಮಾಜದ ಜಾನಪದ ಹಾಡುಗಳಿಗೆ ಮರುಳಾದ ವಿದೇಶಿ ಯುವತಿಯರು ಬೆಳಂಬಾರದ ಜಾನಪದ ಕಲಾವಿದೆ ಲಕ್ಷ್ಮೀ ಗೌಡ ಮನೆಗೆ ಆಗಮಿಸಿ ಅವರಿಂದ ಹಾಡನ್ನು ಹೇಳಿಸಿ ಚಿತ್ರೀಕರಣ ಮಾಡಿಕೊಂಡು ಹೋಗಿರುವ ಸಂಗತಿ ತಿಳಿದಿದೆ.
ವಿದೇಶಿ ಮೂಲದ ಇಬ್ಬರು ಯುವತಿಯರು ಭಾರತೀಯ ಸಂಸ್ಕೃತಿಯ ಕುರಿತು ಮತ್ತು ಜಾನಪದ ಕಲೆ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಅವರು ತಾಲೂಕಿನ ಹನಿ ಬೀಚ್‌ಗೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿಯ ಹಾಲಕ್ಕಿಗಳ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಹಾಲಕ್ಕಿ ಸಮುದಾಯದ ಜಾನಪದ ಕಲೆ ಹಾಡುಗಳ ಕುರಿತು ಮಾಹಿತಿ ಪಡೆದು ಅಲ್ಲಿಯೇ ಸ್ಥಳೀಯವಾಗಿ ಇದ್ದ ಬೆಳಂಬಾರದ ಲಕ್ಷ್ಮೀ ಗೌಡ ಮನೆಗೆ ತೆರಳಿ ಅವರಿಂದ ಜಾನಪದ ಹಾಡನ್ನು ಹಾಡಿಸಿದ್ದಾರೆ.
ಅವರು ಹಾಡುತ್ತಿರುವ ಸಂದರ್ಭದಲ್ಲಿ ಚಿತ್ರಿಕರಣ ಮಾಡಿಕೊಂಡಿದ್ದಾರೆ. ಇಂತಹ ವಿದೇಶಿಗರು ನಮ್ಮ ಹಾಲಕ್ಕಿ ಜಾನಪದ ಸಂಸ್ಕೃತಿಗಳ ಕುರಿತು ಮಾಹಿತಿಯನ್ನು ಕಲೆ ಹಾಕಿ ಅದಕ್ಕೆ ಪ್ರೋತ್ಸಾಹ ನೀಡುವುದು ಹೆಮ್ಮೆಯ ಸಂಗತಿ ಎಂದು ಸ್ಥಳೀಯ ಶ್ಯಾಮಲಾ ಗೌಡ ಹೇಳಿದರು. ಲಕ್ಷ್ಮೀ ಗೌಡ ಜೊತೆ ಸೋಮಿ ಗೌಡರವರು ಹಾಡಿಗೆ ದನಿಗೂಡಿಸಿದ್ದಾರೆ.