ಅಂಕೋಲಾ: ಕಾರು ಮರಕ್ಕೆ ಡಿಕ್ಕಿ ಹೊಡೆದು ಐದು ಜನರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಮರಕಲ್ ಬಳಿ ಸಂಭವಿಸಿದೆ. ಹುಬ್ಬಳ್ಳಿ ಸಂತೋಷ ನಗರ ನಿವಾಸಿಗಳಾದ ರೋಹಿತ್ ಗಣೇಶ ವಾಲ್ಮೀಕಿ (20) ಕಿರಣ ಹಿರೇಮಠ, ಮಹೇಶ, ಕಾರ್ತಿಕ ಮತ್ತು ಕಾರು ಚಾಲಕ ಚೆನ್ನವೀರಯ್ಯ ಹಿರೇಮಠ ಅಪಘಾತದಲ್ಲಿ ಗಾಯಗೊಂಡವರಾಗಿದ್ದು ಹುಬ್ಬಳ್ಳಿಯಿಂದ ಕರಾವಳಿ ಪ್ರದೇಶದ ಪ್ರವಾಸಕ್ಕೆ ಹೊರಟ ಇವರು ಹಿಲ್ಲೂರು ಮರಕಲ್ ಬಳಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಕಾರು ಚಾಲಕ ಅತಿ ವೇಗದಲ್ಲಿ ಕಾರನ್ನು ಚಲಾಯಿಸಿ ರಸ್ತೆ ಮಧ್ಯದಲ್ಲಿ ಬಂದ ನಾಯಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು
ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು ಗಾಯಾಳುಗಳನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಾಗಿದೆ.