ಸಿದ್ದಾಪುರ: ಇಲ್ಲಿನ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವದ ಅಂಗವಾಗಿ ‘ಸಾಹಿತ್ಯ ಸಿಂಚನ ಶ್ರೀ’ ಪ್ರಶಸ್ತಿಯನ್ನು ತಾಲೂಕಿನ ಮಗೇಗಾರಿನ ಹಳೆ ಹಾಡು ಬರಹಗಾರ್ತಿ ಶೈಲಜಾ ಹೆಗಡೆ ಅವರಿಗೆ ಪ್ರಕಟಿಸಲಾಗಿದೆ ಎಂದು ಬಳಗದ ಮುಖ್ಯಸ್ಥ ಶಿವಪ್ರಸಾದ ಹೀರೇಕೈ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಬಿಡುಗಡೆ ಸಮಾರಂಭ ನಗರದ ನೆಮ್ಮದಿ ಕುಟೀರದಲ್ಲಿ ಮಾರ್ಚ್ 19 ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಇದೇ ವೇಳೆ ಹಿರಿಯ ಸಾಹಿತಿ ಹಾಗೂ ಪರ್ತಕರ್ತರಾದ ರಾಜೀವ ಅಜ್ಜಿಬಳ ಅವರ ಸಮುಧ್ಧರಣ ಮತ್ತು ದ್ವೀಪಾಂತರ ಹಾಗೂ ಲತಾ ಹೆಗಡೆ ಬಾಳೆಗದ್ದೆ ಅವರ ನುಡಿಸಿಂಚನ ಕೃತಿ ಬಿಡುಗಡೆ ನಡೆಯಲಿದೆ.
ತಾಲೂಕು ಕಸಾಪ ಅಧ್ಯಕ್ಷ ಸುಬ್ರಾಯ ಜಿ‌.ಭಟ್ ಬಕ್ಕಳ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಬರಹಗಾರರಾದ ಎಸ್. ಆರ್. ಎನ್. ಮೂರ್ತಿ ಕೈಗಾ ವಹಿಸಲಿದ್ದಾರೆ.
ಬಳಿಕ ಚುಟುಕು ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು ಭಾಗವಹಿಸುವ ಕವಿಗಳು ಮಾರ್ಚ್ 16ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಗರ್ಭಿಣಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ₹ 6 ಸಾವಿರ ಸಹಾಯ ಧನ