ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸನ್ಮಾನ್ಯ ದಿನಕರ ಶೆಟ್ಟಿಯವರು ಇಂದು ಕುಮಟಾ ತಾಲೂಕಿನ ಹನೇಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಹನೇಹಳ್ಳಿ ಸಿದ್ದೇಶ್ವರ ರಸ್ತೆಗೆ ಚರಂಡಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ (ಅಂದಾಜುಮೊತ್ತ ರೂ. 50ಲಕ್ಷ) ಹಾಗೂ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ (ಅಂದಾಜುಮೊತ್ತ ರೂ. 120ಲಕ್ಷ), ಗೋಕರ್ಣದ ಓಂ ಬೀಚ್ ರಸ್ತೆಯಿಂದ ಅಶೋಕೆ ಮಲ್ಲಿಕಾರ್ಜುನ ದೇವಸ್ಥಾನ ಬೇಲೆಕಾನ ರಸ್ತೆಅಭಿವೃದ್ಧಿ ಕಾಮಗಾರಿಗೆ (ಅಂದಾಜುಮೊತ್ತ ರೂ. 180ಲಕ್ಷ) ಚಾಲನೆ ನೀಡಿದರು.

RELATED ARTICLES  ಗಾಂಧಿವನದಲ್ಲಿ ಗಮನ ಸೆಳೆದ ಪರಿಸರವಾದಿ ಗಜಣ್ಣ..!

ರಾಮಚಂದ್ರಾಪುರಮಠದ ಸ್ವಾಮೀಜಿಗಳಾದ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ, ಹನೇಹಳ್ಳಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತೀ ಗೌಡ, ನಾಡುಮಾಸ್ಕೆರಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಧನುಶ್ರೀ ಅಂಕೋಲೆಕರ, ಉಪಾಧ್ಯಕ್ಷ ಶ್ರೀ ಭರತ್ ಗಾಂವಕರ, ಗೋಕರ್ಣ ಪಂಚಾಯತ್ ಅಧ್ಯಕ್ಷ ಶ್ರೀ ಮಂಜುನಾಥ್ ಜನ್ನು, ತಾ. ಪಂ. ಮಾಜಿ ಸದಸ್ಯ ಶ್ರೀ ಮಹೇಶ ಶೆಟ್ಟಿ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಶ್ರೀ ಚಂದ್ರಶೇಖರ ನಾಯ್ಕ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣೇಶ ಪಂಡಿತ್, ಪಂಚಾಯತ್ ಸದಸ್ಯರುಗಳಾದ ಶ್ರೀ ರಮೇಶ ಪ್ರಸಾದ, ಶ್ರೀ ಸುಜಯ ಶೆಟ್ಟಿ, ಶ್ರೀ ಸತೀಶ್ ದೇಶಭಂಡಾರಿ, ಸಣ್ಣು ಗೌಡ, ಶಶಿಕಲಾ ಗೌಡ, ವತ್ಸಲಾ ಹುಲಸ್ವಾರ, ರಾಜೇಶ್ ನಾಯಕ, ಭಾರತಿ ನಾಯ್ಕ್, ಶಕ್ತಿಕೇಂದ್ರ ಪ್ರಮುಖ ವಿವೇಕಾನಂದ ನಾಯ್ಕ, ಈಶ್ವರ ಮೂಡಂಗಿ, ಜಗದೀಶ್ ಅಂಬಿಗ, ದಯಾನಂದ ನಾಯ್ಕ್, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಶ್ರೀ ಮೋಹನ ನಾಯ್ಕ್, ನಿವೃತ್ತ ಅಭಿಯಂತರ ಶ್ರೀ ಆರ್. ಜಿ. ಭಟ್ ಮತ್ತಿತರರು ಇದ್ದರು.

RELATED ARTICLES  ಹೆಚ್ಚುತ್ತಿದೆ ಸೈಬರ್‌ ವಂಚಕರ ಜಾಲ : ಪೊಲೀಸ್ ನೀಡಿದ ಮಾಹಿತಿ ಏನು?