ಕುಮಟಾ : ತಾಲೂಕಿನ ಶಾಂತೇರಿ ಕಾಮಾಕ್ಷಿ ರಾಮನಾಥ ಲಕ್ಷ್ಮೀ ನಾರಾಯಣ ದೇವಾಲಯದ ಪ್ರಧಾನ ಅರ್ಚಕಾಗಿ ಅನೇಕ ವರ್ಷಗಳಿಂದ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿಕೊಂಡು ಬಂದಿದ್ದ ವೇ.ಮೂ ವರದರಾಜ ಭಟ್ (78) ಹೃದಯಾಘಾತದಿಂದ ಕೊನೆಯುಸಿರೆಳೆದಿದರು.

ಕಾಸರಕೋಡು ಮೂಲದವರಾಗಿದ್ದ ಇವರು ಕಾಸರಕೋಡಿನ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದು ನಂತರದಲ್ಲಿ ಕುಮಟಾದ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ತೆರವಾದ ಅರ್ಚಕ ಸ್ಥಾನವನ್ನು ವಹಿಸಿಕೊಂಡು ದೇವತಾರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅತ್ಯಂತ ಚುರುಕಿನ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಇವರು, ಕರ್ಮಾಂಗ ಮತ್ತು ಹೋಮ ಶ್ರಾದ್ಧಗಳಲ್ಲಿ ಅಪಾರಜ್ಞಾನವನ್ನು ಹೊಂದಿದ್ದರು. ಅಜಾತಶತ್ರುವಾಗಿ ಅತ್ಯಂತ ಗೌರವಾನ್ವಿತ ಬಾಳು ಬದುಕಿದ ಇವರು ಮಕ್ಕಳು ಹಾಗೂ ಬಂಧು ಬಾಂಧವರನ್ನು ಅಗಲಿದ ಇವರಿಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಸಮಾಜ ಬಾಂಧವರು ಅಂತಿಮ ನಮನ ಸಲ್ಲಿಸಿದ್ದಾರೆ.

RELATED ARTICLES  ಶಿರಸಿಯಲ್ಲಿ ಕಾರುಗಳ ನಡುವೆ ಅಪಘಾತ: ಚಾರ್ಟೆಡ್ ಅಕೌಂಟೆಂಟ್ ಶಿವಾನಂದ ಹೆಗಡೆ ಸಾವು: ಐವರಿಗೆ ಗಂಭೀರ ಗಾಯ