ಹೊನ್ನಾವರ:-ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ರಾಮಕೃಷ್ಣ ಪರಮಹಂಸರ ೧೮೮ನೇ ಜನ್ಮೋತ್ಸವದ ಅಂಗವಾಗಿ ಏರ್ಪಡಿಸಿದ ಸಂಗೀತ ಕಾರ್ಯಕ್ರಮದಲ್ಲಿ ಹಡಿನಬಾಳದ ರಾಗಶ್ರೀ ಸಂಗೀತ ವಿದ್ಯಾಲಯದ ಪ್ರಾಚಾರ್ಯರಾದ ವಿದ್ವಾನ್ ಶಿವಾನಂದ ಭಟ್ಟ ಇವರಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಸೇರಿದ ಅಪಾರ ವಿದ್ವಜ್ಜನ ಶೋತ್ರುಗಳ ಮನಸಣಿಸಿತು. ಒಂದುವರೆ ಗಂಟೆಗಳ ಕಾಲ ನಡೆಸಿಕೊಟ್ಟ ಸಂಗೀತ ಕಛೇರಿಯಲ್ಲಿ ರಾಗ ಯಮನನೊಂದಿಗೆ ಆರಂಭಿಸಿ ನಂತರದಲ್ಲಿ ಭಜನ್ ಗಳು ದಾಸರಪದಗಳು ವಚನಗಳು ಮೈಸೂರಿಗರ ಹಾಗೂ ಆಶ್ರಮದ ಯತಿವರೇಣ್ಯರ ಮನ ಸೂರೆಗೊಂಡಿತು.
ಇವರಿಗೆ ಖ್ಯಾತ ತಬಲಾವಾದಕರಾದ ವಿದ್ವಾನ್ ಎನ್.ಜಿ.ಹೆಗಡೆ ಕಪ್ಪೇಕೆರಿ ತಬಲಾ ಸಾಥ್ ಸುಂದರವೂ ಸಮರ್ಥವಾಗಿಯು ನೀಡಿದರೆ ಅಷ್ಟೇ ಸಮರ್ಥವಾಗಿ ಶ್ರೀ ಹರಿಶ್ಚಂದ್ರ ನಾಯ್ಕ ಸಂವಾದಿನಿ ಸಾಥ್ ನೀಡಿದರು. ಕುಮಾರ ಸಮರ್ಥ ಹೆಗಡೆ ಹಾಗೂ ಕುಮಾರ ಪ್ರಥಮ್ ಭಟ್ಟ ಮಂಜಿರಾ ಸಾಥ್ ನೀಡಿದರು.ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಹಾಗೂ ಸ್ವಾಮಿ ಸರ್ವಜಯಾನಂದ ಅವರು ಕಲಾವಿದರನ್ನು ಗೌರವಿಸಿ ಆಶೀರ್ವದಿಸಿದರು.