ಕಳೆದ ಐದು ವರ್ಷದಿಂದ ಸಾಗರದ ಹಿಂದೂ ಸಂಘಟನೆಗಳು ಹಾಲಪ್ಪ ವಿರುದ್ದ ಮುನಿಸಿಕೊಂಡಿರುವುದು ಜಾಹೀರಾದ ವಿಷಯ. ಗಣಪತಿ ಕೆರೆ ಒತ್ತುವರಿ ತೆರವು ವಿಚಾರದಲ್ಲಿ ಹಿಂದೂ ಸಂಘಟನೆಗಳ ವಿರುದ್ದ ಮುನಿಸಿದ್ದ ಹರತಾಳು ಹಾಲಪ್ಪ ಈಗ ಹಿಂದೂ ಸಂಘಟನೆಗಳು ತಿರುಗಿ ಬೀಳುವುದು ಖಚಿತವಾಗಿ ಸಂಘದ ಹಿರಿಯರ ಮೂಲಕ ಸಮಾಧಾನ ಮಾಡಲು ಯತ್ನ ಮಾಡುತ್ತಿದ್ದಾರೆ.
ಈಗಾಗಲೇ ಬಿಜೆಪಿ ಟಿಕೆಟ್ ಸಂಘಟನೆಯ ಹೊಸ ಮುಖಕ್ಕೆ ನೀಡುತ್ತಾರೆಂದು ಬಿಜೆಪಿ-ಸಂಘಪರಿವಾರದ ವಲಯದಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ಹಾಲಿ ಶಾಸಕ ಹೆಚ್ ಹಾಲಪ್ಪ ತಮ್ಮ ಇಮೇಜ್ ಸರಿ ಮಾಡಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.
ಸಂಘದ ಹಿರಿಯ ಭಾನುಪ್ರಕಾಶ್‌ರವರು ತಮ್ಮ ಮಗನಿಗೆ ಶಿವಮೊಗ್ಗ ನಗರ ಬಿಜೆಪಿ ಟಿಕೇಟಿಗೆ ಯತ್ನ ಮಾಡುತ್ತಿದ್ದು, ಟಿಕೇಟ್ ದೊರೆತರೆ ಬೇಕಾದ ಹಣಕಾಸು ಸಹಕಾರ ಹಾಲಪ್ಪ ಮಾಡುವುದೆಂದು, ಹಾಲಪ್ಪಗೆ ಟಿಕೇಟ್ ಸಿಕ್ಕರೆ ಹಿಂದೂ ಸಂಘಟನೆಗಳನ್ನು ಭಾನುಪ್ರಕಾಶ್ ಬಳಸಿಕೊಂಡು ತಣ್ಣಗಾಗಿಸುವ ತಂತ್ರ ನೆಡೆಯುತ್ತಿದೆ.

RELATED ARTICLES  ಸೂರಜ್ ನಾಯ್ಕ ಸೋನಿಗಾಗಿ ಕಾದು ಕುಳಿತ ಅಭಿಮಾನಿಗಳು: ಕಾನೂನು ಹೋರಾಟಕ್ಕೆ ಕೊನೆ ಎಂದು?

ಹಿಂದೂ ಸಂಘಟನೆಗಳ ಮೇಲೆ ದರ್ಪ ಮೆರೆವಾಗ ಇಲ್ಲದ ಭಾನುಪ್ರಕಾಶ್ ತಮ್ಮ ಮಗನ ರಾಜಕಾರಣದ ಭವಿಷ್ಯಕ್ಕಾಗಿ ಹಿಂದೂ ಸಂಘಟನೆಗಳ ಹಿತಾಸಕ್ತಿಯ ಬಲಿ ಕೊಡುತ್ತಿದ್ದಾರೆಂಬುದು ಹಿಂದೂ ಸಂಘಟನೆ ಕಾರ್ಯಕರ್ತರ ಬೇಗುದಿಗೆ ಕಾರಣವಾಗಿದೆ.

RELATED ARTICLES  ಕೊರೋನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ

ಈಗಾಗಲೇ ಸಂಘದ ಸ್ವಯಂಸೇವಕ ಕೇಶವ ಸಂಪೇಕೈ ಮೂಲಕ ಈಗಾಗಲೇ ಒಂದು ಸಂಧಾನ ನೆಡೆಸಿದ್ದು ಹಲವು ಕಾರ್ಯಕರ್ತರು ಒಲ್ಲದ ‌ಮನಸ್ಸಿಂದ ತೆರಳಿದ್ದಾರೆ ಅನ್ನುವ ಮಾಹಿತಿ ಲಭಿಸಿದೆ.

ಸಾಗರದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾಯಿಸಬೇಕೆಂಬ ಕೂಗು ಜೋರಾಗಿ ಕೇಳುತ್ತಿದ್ದು, ಡ್ಯಾಮೇಜ್ ಕಂಟ್ರೋಲ್ ಮಾಡಲು ಹರತಾಳು ಹರಸಾಹಸ ಮಾಡುತ್ತಿದ್ದಾರೆ.