ಕುಮಟಾ : ಎಲ್ಲಾ ಪಕ್ಷಗಳಂತೆ ನಮ್ಮ ಪಕ್ಷದ್ದು ಪೊಳ್ಳು ಭರವಸೆಗಳಲ್ಲ. ನಾವು ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಉಪಕಾರ ಎಷ್ಟು ಮಾಡಿದ್ದೇನೋ ತಿಳಿಯದು ಆದರೆ ಉಪದ್ರವ ಕೊಟ್ಟಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಕುಮಟಾದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದರು. ಬಿಜೆಪಿ ಪಕ್ಷದ ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ನನ್ನೆಲ್ಲಾ ಕಾರ್ಯಕ್ರಮದಲ್ಲಿ ಅವರು ಜೊತೆಗೆ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.

ಬಿ.ಜೆ.ಪಿ ಆಯ್ಕೆಯಾದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಕಲಂ 370 ರದ್ದು ಮಾಡಿದಾಗ ವಿರೋಧಿಗಳು ಬೆಂಕಿ ಹಚ್ಚುವ ಬೆದರಿಕೆ ಹಾಕಿದರಾದರೂ, ಏನೂ ಮಾಡಲಾಗಲಿಲ್ಲ. ಪಾಕಿಸ್ತಾನಿ ಮಕ್ಕಳು ಭಾರತದಿಂದ ಏನು ಬೇಕು ಕೇಳಿದರೆ, ಮೋದಿಯವರನ್ನು ನಮ್ಮದೇಶದ ನಾಯಕರಾಗಿ ಕೊಡಿ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದರು. ಈಗಿನ ಬಿಜೆಪಿ ಸರಕಾರ ನನ್ನ ಕ್ಷೇತ್ರಕ್ಕೆ ಯಾವುದೇ ಸರಕಾರ ನೀಡದಷ್ಟು ಅನುದಾನವನ್ನು ನೀಡಿದೆ ಎಂದ ಅವರು.

RELATED ARTICLES  ಕೊಂಕಣದಲ್ಲಿ ಸಂಭ್ರಮದ 75ರ ಸ್ವಾತಂತ್ರ್ಯೋತ್ಸವ

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವಾದಾಗ ನಮ್ಮದೇಶದ ಯುವಕರನ್ನು ಉಳಿಸುವ ನಿಟ್ಟಿನಲ್ಲಿ ಮೋದಿಯವರು ರಷ್ಯಾದ ಪ್ರಧಾನಿ ಜೊತೆಗೆ ಮಾತನಾಡಿ ಯುದ್ಧ ನಿಲ್ಲಿಸುವ ಕೆಲಸ ಮಾಡಿದರು, ಆಗ ಯಾವುದೇ ಧರ್ಮ ಜಾತಿ ನೋಡದೆ ಜನರಿಗೆ ಸ್ಪಂದಿಸಿದ್ದಾರೆ. ಕೇವಲ ರಾಷ್ಟ್ರವನ್ನು ಹಾಗೂ ರಾಷ್ಟ್ರೀಯತೆಯನ್ನು ನಂಬಿಕೊಂಡ ಪ್ರಧಾನಿ ನಮ್ಮವರಾಗಿರುವುದು ನಮಗೆ ಹೆಮ್ಮೆಯ ವಿಚಾರ ಎಂದರು.

RELATED ARTICLES  ಸರಣಿ ಕಳ್ಳತನ : ಬೆಳಗಿನ ಜಾವದಲ್ಲಿ ಅಂಗಡಿ ಹಾಗೂ ಮನೆಗೆ ಕನ್ನ ಹಾಕಿದ ಖಧೀಮರು

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ, ಪಕ್ಷದ ಪ್ರಮುಖರಾದ ಡಾ.ಜಿ ಜಿ ಹೆಗಡೆ, ಕೆ.ಜಿ ನಾಯ್ಕ, ನಾಗರಾಜ ನಾಯಕ ತೊರ್ಕೆ ಹಾಗು ಇತರರು ಇದ್ದರು.