ಭಟ್ಕಳ- ಜಿಲ್ಲೆಯ ಕ್ರಿಯಾಶೀಲ ಸಂಘಟನೆ ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ವತಿಯಿಂದ ಬರುವ ಯುಗಾದಿ ಹಬ್ಬದಂದು ನಿನಾದ ಯುಗಾದಿ ಸಾಹಿತ್ಯ ಸಂಭ್ರಮ ಎನ್ನುವ ಸಾಹಿತ್ಯಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಜನತಾ ವಿದ್ಯಾಲಯ ಶಿರಾಲಿಯಲ್ಲಿ ಮಾರ್ಚ ೨೨ ಸಂಜೆ ೪ ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಲೇಖಕಿ ರೇಷ್ಮಾ ಉಮೇಶ ಅವರ ಎರಡನೇ ಕೃತಿ ” ಆತ್ಮ ನಿವೇದನೆ ” ಈ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ. ನಂತರ ಅಂತರ ತಾಲೂಕು ಮಟ್ಟದ ಮುಕ್ತ ಕವಿಗೋಷ್ಠಿ ನಡೆಯಲಿದೆ.ತಾಲೂಕು ಹಾಗೂ ಪಕ್ಕದ ತಾಲೂಕಿನ ಹಿರಿಕಿರಿಯ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಬಹುದಾಗಿದೆ.
ವೇದಿಕೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿನಾದ ಸಂಚಾಲಕ ಸಾಹಿತಿ ಉಮೇಶ ಮುಂಡಳ್ಳಿ ವಹಿಸಲಿದ್ದು,ಜನತಾ ವಿದ್ಯಾಲಯದ ಪ್ರಾಂಶುಪಾಲ ಅಮೃತ ಬಿ ರಾಮರಥ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ತಾಲೂಕಿನ ಹಿರಿಯ ಕವಿಗಳು ನ್ಯಾಯವಾದಿಗಳು ಕಸಾಪ ನಿಕಟ ಪೂರ್ವ ಅಧ್ಯಕ್ಷ ಶಂಕರ ಕೆ .ನಾಯ್ಕ,ಲೇಖಕಿ ಹಾಗೂ ನ್ಯೂ ಇಂಗ್ಲಿಷ್ ಶಾಲೆಯ ಹಿರಿಯ ಶಿಕ್ಷಕಿ ರಾಜಂ ಹಿಚ್ಕಡ್ ವಹಿಸಲಿದ್ದಾರೆ ಎಂದು ನಿನಾದ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.