ಕುಮಟಾ : ಕಳೆದ 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸಿದಲ್ಲೆಲ್ಲ ಬಿಜೆಪಿ ಗೆಲುವು ಸಾಧಿಸಿದೆ ಹಾಗಾಗಿ ಸಿದ್ದರಾಮಯ್ಯ ಈ ಬಾರಿಯೂ ಪ್ರಚಾರ ಮಾಡಿದರೆ ಬಿಜೆಪಿಗೆ ಒಳಿತು ಎಂದು ಹೇಳಿಕೆ ಕೊಟ್ಟ ಕೋಟ ಪೂಜಾರಿಗೆ ಮಾಜಿ ಶಾಸಕಿ ಅವರದೇ ಧಾಟಿಯಲ್ಲಿ ಬಿಸಿಮುಟ್ಟಿಸಿದ್ದಾರೆ.

ಬಡ ಹಾಗೂ ಹಿಂದುಳಿದ ವರ್ಗಗಳ ಯುವಕರ ಸಾವೇ ಬಿಜೆಪಿಯ ಗೆಲುವಿನ ಟ್ರಂಪ್ ಕಾರ್ಡ್. ಈ ಬಡ ಹುಡುಗರನ್ನು ಮತೀಯ ಸಂಘರ್ಷದ ಜಾಲಕ್ಕೆ ಸಿಲುಕಿಸಿ ನಂತರ ಅವರ ವ್ಯವಸ್ಥಿತ ಹತ್ಯೆಯ ಸಂಚು ಮಾಡಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿಗರ ಕಳೆಯಾಗಿದೆ. ಆದರೆ ಈ ಬಾರಿ ಆ ತರಹದ ಯಾವುದೇ ಘಟನೆಗೂ ಪ್ರಭುದ್ದ ಜನರಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಅವಕಾಶ ನೀಡುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಹೆಣವೂ ಇಲ್ಲ ಹಾಗಾಗಿ ಬಿಜೆಪಿಗೆ ಅಧಿಕಾರವೂ ಇಲ್ಲ ಎಂದು ತಿಳಿದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಮತಿಭ್ರಮಣೆಗೆ ಒಳಗಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಕುಟುಕಿದರು.

ಮುಂದುವರೆದು ಮಾತನಾಡಿದ ಮಾಜಿ ಶಾಸಕಿಯವರು 2018ರ ಚುನಾವಣೆಯ ಮೊದಲು ಬಿಜೆಪಿಯ ಅಧಿನಾಯಕ ಪ್ರಧಾನಿ ನರೇಂದ್ರ ಮೋದಿಯವರ ಫ್ಲೆಕ್ಸ್ ಗಳನ್ನು ಹರಿದು ಉದ್ದಟತನ ತೋರಿದ ದಿನಕರ ಶೆಟ್ಟಿಯವರಿಗೆ ಬಿಜೆಪಿಗರು ಕೆಂಪು ಕಂಬಳಿ ಹಾಸಿ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ ಹಾಗಾದರೆ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ನರೇಂದ್ರ ಮೋದಿಯವರ ಫ್ಲೆಕ್ಸ್ಗಳನ್ನು ಹರಿಯುವುದನ್ನೇ ಕಾಯಕ ಮಾಡಿಕೊಂಡರೆ ಟಿಕೆಟ್ ಹಾಗೂ ಗೆಲುವು ಖಾತ್ರಿಯೆ? ಎಂದು ಕೋಟ ರವರಿಗೆ ತಿರುಗೇಟು ನೀಡಿದರು.

RELATED ARTICLES  ಕುಮಟಾದಲ್ಲಿ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ದಿನಕರ ಶೆಟ್ಟಿ.

ಬಿಜೆಪಿಯವರ ಭ್ರಷ್ಟ ಲಜ್ಜೆಗೇಡಿ ಆಡಳಿತಕ್ಕೆ ಜನ ಬೇಸತ್ತಿದ್ದು ಈ ಬಾರಿ ಸಿದ್ದರಾಮಯ್ಯ ನವರಲ್ಲ. ನಮ್ಮ ತಳಮಟ್ಟದ ಕಾರ್ಯಕರ್ತರ ಪ್ರಚಾರವೇ ಬಿಜೆಪಿಯನ್ನು ಬುಡಸಮೇತ ಕಿತ್ತೊಗೆಯಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳ ಹೇಳಿಕೆಯನ್ನು ನೋಡಿದರೆ, ಈ ಗ್ಯಾರಂಟಿ ಯೋಜನೆಗಳು ವಿರೋಧ ಪಕ್ಷಗಳ ನಿದ್ದೆಗೆಡಿಸಿದ್ದಂತು ಸತ್ಯ. ಕಾರ್ಡ ವಿತರಣೆಗೆ ಹೊದಲ್ಲೆಲ್ಲ ಜನ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದು, ಇದು ನಮ್ಮ ಕಾಂಗ್ರೆಸ್ ಪಕ್ಷ ಜನರ ಬಗ್ಗೆ ಹೊಂದಿರುವ ಕಾಳಜಿಗೆ ಹಾಗೂ ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಇರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು.

ನಮ್ಮ ಪಕ್ಷದ ಗ್ಯಾರಂಟಿ ಕಾರ್ಡಗಳನ್ನು ಚೈನಾ ಕಂಪನಿ ಗ್ಯಾರಂಟಿ ಕಾರ್ಡಗಳಿಗೆ ಹೋಲಿಸುತ್ತಿರುವ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಿಜೆಪಿ ನಾಯಕರು ಒಮ್ಮೆ ಭಾರತ-ಚೀನಾ ಗಡಿಯ ಬಗ್ಗೆ ವಾಸ್ತವಿಕ ಅಂಶವನ್ನು ಜನರ ಮುಂದೆ ತರುವುದು ಒಳ್ಳೆಯದು. ತಾವು ಜನತೆಗೆ ಒಳ್ಳೆಯದನ್ನು ಮಾಡುವುದಿಲ್ಲ, ಬೇರೆಯವರು ಒಳ್ಳೆಯದನ್ನು ಮಾಡಲು ಹೋದಾಗ ಅದನ್ನು ವಿರೋಧಿಸುತ್ತೇವೆ ಎನ್ನುವ ಅಸೂಯೆ ಮನಸ್ಥಿತಿ ಈ ಬಿಜೆಪಿ ನಾಯಕರದ್ದು ಎಂದು ಕಿಡಿ ಕಾರಿದರು.

RELATED ARTICLES  ಕನ್ನಡ ಪ್ರೇಮ ಮೆರೆದ ಮಕ್ಕಳು

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಬಾರಿ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ ಹೆಚ್ಚಿನ ಎಲ್ಲಾ ಭರವಸೆಗಳನ್ನು ಈಡೆರಿಸಿದೆ. ಆದರೆ ನಂತರ ಬಂದ ಬಿಜೆಪಿ ನೇತೃತ್ವದ ಸರ್ಕಾರ 40% ಮೂಲಕ ತಮ್ಮವರ ಖಜಾನೆ ತುಂಬಿಸುವ ಕೆಲಸದಲ್ಲಿ ಮುಳುಗಿದ್ದು ದುರದೃಷ್ಟಕರ..2014 ರಲ್ಲಿ ಬಿಜೆಪಿ ತಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜನಧನ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುವ ಭರವಸೆಯನ್ನು ನೀಡಿತ್ತು.. ಅಧಿಕಾರಕ್ಕೆ ಬಂದೂ ಇಷ್ಟು ವರ್ಷಗಳಾದರೂ ಕೊಟ್ಟು ಭರವಸೆಯನ್ನು ಈಡೇರಿಸಲು ಸಾಧ್ಯವಾಗ ಬಿಜೆಪಿ ಸರ್ಕಾರ ನಮ್ಮ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಟಾಂಗ್ ನೀಡಿದ್ದಾರೆ.