ರಕ್ತದೊತ್ತಡ ಇತ್ತೀಚೆಗೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ರಕ್ತದೊತ್ತಡ ಅತಿಯಾದರೂ ತೊಂದರೆ, ಕಡಿಮೆಯಾದರೂ ತೊಂದರೆ. ಆದರೆ ನಿಮಗೆ ರಕ್ತದೊತ್ತಡ ಇದೆಯೊ ಇಲ್ಲವೊ ಎಂಬುದರ ಬಗ್ಗೆ ನಿಖರವಾಗಿ ತಿಳಿಯಲು ಕೆಲವೊಮ್ಮೆ ಸಾಧ್ಯವಾಗದಿರಬಹುದು. ಇದರಿಂದ ಸಮಸ್ಯೆ ಹೆಚ್ಚಾಗಲೂ ಬಹುದು.

ಆದ್ದರಿಂದ ನಿಮಗೆ ಬಿಪಿ ಇದೆಯೋ ಇಲ್ಲವೋ ಎಂದು ತಿಳಿದು ಸೂಕ್ತ ಕ್ರಮ ತೆಗೆದುಕೊಳ್ಳಲು ರಕ್ತದೊತ್ತಡದ ಕೆಲವು ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ.

ಬಿಪಿ ಲಕ್ಷಣಗಳು:
* ಹೃದಯದ ಬಡಿತದಲ್ಲಿ ಏರುಪೇರು
* ತಲೆಸುತ್ತು
* ನಿಶ್ಯಕ್ತಿ
* ಏಕಾಗ್ರತೆ ಕೊರತೆ
* ಪಿತ್ತ
* ದೃಷ್ಠಿ ಮಂಜಾಗುವುದು
* ಉಸಿರಾಟ ಭಾರವಾಗುವುದು
* ದಾಹ ಹೆಚ್ಚಾಗುವುದು
* ಒತ್ತಡ
* ನಿದ್ರಾಹೀನತೆ
* ರಕ್ತ ಸಂಚಲನದಲ್ಲಿ ಏರುಪೇರು

ರಕ್ತದೊತ್ತಡವಿದ್ದರೆ ಈ ರೀತಿ ಮಾಡಿ:

RELATED ARTICLES  ಜೀವ ಸಂಜೀವಿನಿ ಕಲ್ಲಂಗಡಿ ಬೀಜ! ನಿಮಗೆಷ್ಟು ಗೊತ್ತು ನೋಡಿ

1. ನಿಮಗೆ ಹೆಚ್ಚಿನ ರಕ್ತದೊತ್ತಡವಿದ್ದರೆ, ಉಪ್ಪನ್ನು ಕಡಿಮೆ ತಿನ್ನಿ. ಕಡಿಮೆ ರಕ್ತದೊತ್ತಡವಿದ್ದರೆ ಸಕ್ಕರೆ ಮತ್ತು ಉಪ್ಪನ್ನು ಸ್ವಲ್ಪ ಹೆಚ್ಚು ತಿನ್ನಲು ಸಲಹೆ ನೀಡಲಾಗುತ್ತದೆ. ಇದು ರಕ್ತದ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ.

2. ರಕ್ತದೊತ್ತಡ ಸಮಸ್ಯೆ ತೂಕಕ್ಕೂ ಸಂಬಂಧಿಸಿರುತ್ತದೆ. ತುಂಬಾ ಹೆಚ್ಚಾ ತೂಕವಾದರೆ ಅದು ದೇಹದಲ್ಲಿ ರಕ್ತ ಸಂಚಲನವನ್ನೂ ತಡೆಯುತ್ತದೆ. ಆದ್ದರಿಂದ ನಿಮ್ಮ ಎತ್ತರಕ್ಕೆ ತಕ್ಕಷ್ಟು ತೂಕ ಹೊಂದಲು ಪ್ರಯತ್ನಿಸಿ.

3. ವ್ಯಾಯಾಮ ಮಾಡದಿರುವುದೂ ಸಹ ರಕ್ತದೊತ್ತಡ ಬರಲು ಕಾರಣವಾಗಬಹುದು. ದೈಹಿಕ ಚಟುವಟಿಕೆ ಕಡಿಮೆಯಾದರೆ ರಕ್ತಸಂಚಲನದ ಮೇಲೆ ಪರಿಣಾಮ ಬೀರುತ್ತದೆ.

RELATED ARTICLES  But who has any right to find of existence in present

4. ಅತಿಯಾದ ರಕ್ತದೊತ್ತಡ ಕಡಿಮೆ ಮಾಡಲು ಕೊಲೆಸ್ಟ್ರಾಲ್ ಹೆಚ್ಚಿರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ. ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸೇರಿಕೊಂಡರೆ ಹೃದಯ ಸ್ಥಂಭನಕ್ಕೆ ಕಾರಣವಾಗುತ್ತದೆ.

5. ಫೈಬರ್ ಅಂಶದ ಆಹಾರ ಪದಾರ್ಥಗಳನ್ನು, ಫೋಲಿಕ್ ಆಸಿಡ್, ಪೊಟಾಶಿಯಂ, ವಿಟಮಿನ್ಸ್ ಇರುವ ಆಹಾರಗಳನ್ನು ಸೇವಿಸಿದರೆ ರಕ್ತದೊತ್ತಡ ನೈಸರ್ಗಿಕವಾಗಿ ಹತೋಟಿಗೆ ಬರುತ್ತದೆ.

6. ಬೆಳ್ಳುಳ್ಳಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇದರಿಂದ ರಕ್ತಸಂಚಲನವೂ ಸರಾಗವಾಗುತ್ತದೆ.

7. ಮೀನಿನ ಎಣ್ಣೆಯೂ ಕೂಡ ಏರೊತ್ತಡವನ್ನು ಕಡಿಮೆ ಮಾಡಬಹುದಾದ ಒಂದು ಮಾರ್ಗ