ಕುಮಟಾ : ಸತ್ವಾಧಾರ ಫೌಂಡೇಶನ್ ವತಿಯಿಂದ ಮಾರ್ಚ್ 26 ರವಿವಾರ ಮಧ್ಯಾಹ್ನ 3:15 ರಿಂದ ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ “ಸಾಗುತಿರಲಿ ಬಾಳ ಬಂಡಿ” ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಪ್ರಶಸ್ತಿ ವಿಜೇತ ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನ ಉದ್ಘಾಟಿಸಲಿದ್ದಾರೆ. ಉದ್ಯಮಿಗಳಾದ ವಸಂತ ರಾವ್ ಅಧ್ಯಕ್ಷತೆ ವಹಿಸಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್ ಭಟ್ಟ, ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಲೆಕ್ಕಪರಿಶೋಧಕ ವಿನಾಯಕ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ರವೀಂದ್ರ ಭಟ್ಟ ಸೂರಿಯವರ ಭಾವಾಂತರಂಗ ಕೃತಿ ಲೋಕಾರ್ಪಣೆಗೊಳ್ಳಲಿದೆ.

RELATED ARTICLES  ಸನ್ಮಾನ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಕವಾಗಲಿ : ಭಾರತಿ ನಾಯ್ಕ

ಬಾಳ ಬಂಡಿ ಸಾಗುವಲ್ಲಿ ಯಾರು ಪ್ರಧಾನರು..? ಗಂಡನೋ..? ಹೆಂಡತಿಯೋ..? ಎಂಬ ಬಗ್ಗೆ ಎರಡು ತಂಡಗಳಲ್ಲಿ ಮಾತಿನ ಜಟಾಪಟಿ ನಡೆಯಲಿದ್ದು, ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಶಿಕ್ಷಕ, ಸಾಹಿತಿ ಸಂದೀಪ ಭಟ್ಟ ಮೇಲನಗಂಟಿಗೆ, ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ, ಖ್ಯಾತ ಯಕ್ಷಗಾನ ಅರ್ಥದಾರಿ ಮಂಜುನಾಥ ಗಾವ್ಕರ್ ಬರ್ಗಿ, ಸಾಹಿತಿ ತಿಗಣೇಶ ಮಾಗೋಡ, ಉಪನ್ಯಾಸಕ ಚಿದಾನಂದ ಭಂಡಾರಿ ಕಾಗಾಲ ಭಾಗವಹಿಸಲಿದ್ದಾರೆ. ಶಿಕ್ಷಕ ರವೀಂದ್ರ ಭಟ್ಟ ಸೂರಿ ಮಾತಿನ ಜಟಾಪಟಿಯ ನಿರ್ವಹಣೆ ಮಾಡಲಿದ್ದು, ಲಾಯನ್ಸ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಕಾರ್ಯಕ್ರಮ ನಿರೂಪಿಸುವರು ಎಂದು ಸತ್ವಾಧಾರ ಫೌಂಡೇಶನ್ ನ ಸಂಸ್ಥಾಪಕ ಗಣೇಶ ಜೋಶಿ ಸಂಕೊಳ್ಳಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

RELATED ARTICLES  ಹಿಂದುಗಳ ಹತ್ಯೆಗೆ ಖಂಡನೆ : ಜನರ ಸುರಕ್ಷೆಗಾಗಿ ನಡೆಯಲಿದೆ "ಜನ ಸುರಕ್ಷಾ ಯಾತ್ರೆ"

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಅವರು ಕೋರಿದ್ದಾರೆ.