ಕುಮಟಾ : ಮಾ. 27 ರ ಸೋಮವಾರ ವಿಶ್ವರಂಗಭೂಮಿ ದಿನಾಚರಣೆಯ ಕಾರ್ಯಕ್ರಮ, ಹಾಗೂ ನೂತನವಾಗಿ ಅಸ್ತಿತ್ವಕ್ಕೆ ಬರುತ್ತಿರುವ ರಂಗಸಾರಸ್ವತ ಎಂಬ ಸಾಹಿತ್ಯಿಕ, ಸಾಂಸ್ಕೃತಿಕ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮವನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾ ಹಾಗೂ ವಿಧಾತ್ರಿ ಅಕಾಡೆಮಿ ಮಂಗಳೂರು ಇವರ ಸಹಯೋಗದಲ್ಲಿ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಅಪರಾಹ್ನ 3 ಗಂಟೆಯಿಂದ 4.30 ರ ವರೆಗೆ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವಾನ್ವಿತ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಹೊಸಹೆರವಟ್ಟಾ ಇವರು ವಹಿಸಲಿದ್ದಾರೆ. ಉದ್ಘಾಟಕರಾಗಿ ಹಿರಿಯ ರಂಗಕರ್ಮಿ ನಟ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಸಮಾಜಸೇವಕ ವಿನೋದಪ್ರಭು ಹೆಗಡೆ, ಚಲನಚಿತ್ರ ನಿರ್ಮಾಪಕ ಸುಬ್ರಾಯವಾಳ್ಕೆ .ಚಲನಚಿತ್ರ ನಟ ಶಶಿಭೂಷಣಕಿಣಿ ಉಡುಪಿ‌. ಚಲನಚಿತ್ರ ವಿತರಕರಾದ ಟಿ ಎ ಶ್ರೀನಿವಾಸ ಮಂಗಳೂರು. ಹಾಗೂ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿಯವರು ಭಾಗವಹಿಸಲಿದ್ದಾರೆ.

RELATED ARTICLES  ನದಿಪಾತ್ರಗಳಲ್ಲಿನ ಮರಳು ದಿಬ್ಬಗಳಿಂದ ಮರಳು ತೆಗೆಯುವಿಕೆ ಹಾಗೂ ಸಾಗಾಣಿಕೆಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಆದೇಶ.

ಈ ಸಂದರ್ಭದಲ್ಲಿ ರಂಗಕರ್ಮಿ ಕೃಷ್ಣಾನಂದ ಭಟ್ಟ ಉಪ್ಲೆ, ಸಾಹಿತಿ ಶ್ರೀಧರ ಉಪ್ಪಿನಗಣಪತಿ ಇವರನ್ನು ಸನ್ಮಾನಿಸಲಾಗುವುದು.
ಸಹೃದಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರಂಗಸಾರಸ್ವತದ ಆಡಳಿತ ನಿರ್ದೇಶಕರಾದ ಕಾಗಾಲ ಚಿದಾನಂದ ಭಂಡಾರಿಯವರು ವಿನಂತಿದ್ದಾರೆ.

RELATED ARTICLES  ಪರೇಶ್ ಸಾವಿನ ಕೇಸ್​​ನ್ನು NIA ಮೂಲಕ ನಡೆಸಬೇಕೆಂದು ಆಗ್ರಹ : ಶಿರಸಿಯಲ್ಲಿ ಶಾಂತಿಗಾಗಿ ಸಂತರ ನಡಿಗೆ.