ಕುಮಟಾ : ಖ್ಯಾತ ನಿರೂಪಕ, ಶಿಕ್ಷಕ, ಸಾಹಿತಿ ಹೆಗಡೆಯ ರವೀಂದ್ರ ಭಟ್ಟ ಸೂರಿಯವರ 8 ನೇ ಕೃತಿ “ಭಾವಾಂತರಂಗ” ಲೋಕರ್ಪಾಣೆಗೊಳ್ಳಲಿದ್ದು, ಮಾ. 26 ರವಿವಾರ ತಾಲೂಕಿನ ನಾದಶ್ರೀ ಕಾಲಕೇಂದ್ರದಲ್ಲಿ ನಡೆಯುವ ಸತ್ವಾಧಾರ ಫೌಂಡೇಶನ್ ನ ‘ಸಾಗುತಿರಲಿ ಬಾಳ ಬಂಡಿ’ ಕಾರ್ಯಕ್ರಮದಲ್ಲಿ ಈ ಕಾರ್ಯ ನಡೆಯಲಿದೆ.

ಅತ್ಯುತ್ತಮ ನಿರೂಪಕರಾಗಿ, ಸಾಹಿತಿಗಳಾಗಿ ಈಗಾಗಲೇ ಏಳು ಕೃತಿಗಳನ್ನು ರಚಿಸಿರುವ ಇವರು ನಾಲ್ಕು ಸಾಲುಗಳ ಮುಕ್ತಕಗಳನ್ನು ಹೊಂದಿಸಿ ಅದನ್ನು ಪುಸ್ತಕದ ರೂಪದಲ್ಲಿ ಹೊರತರುತ್ತಿದ್ದಾರೆ. ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್ ಭಟ್ಟ ಕೃತಿ ಅನಾವರಣ ಗೊಳಿಸುವರು. ಈ ಕಾರ್ಯಕ್ರಮವನ್ನು ಪ್ರಶಸ್ತಿ ವಿಜೇತ ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನ ಉದ್ಘಾಟಿಸಲಿದ್ದಾರೆ. ಉದ್ಯಮಿಗಳಾದ ವಸಂತ ರಾವ್ ಅಧ್ಯಕ್ಷತೆ ವಹಿಸಲಿದ್ದು, ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಲೆಕ್ಕಪರಿಶೋಧಕ ವಿನಾಯಕ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಎಲ್ಲ ಸಾಹಿತ್ಯ ಆಸಕ್ತರು ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಚಂದಗಾಣಿಸುವಂತೆ ಕೃತಿಕಾರ ರವೀಂದ್ರ ಭಟ್ಟ ಸೂರಿ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

RELATED ARTICLES  ಅಭಿನಂದನಾ ಕಾರ್ಯಕ್ರಮದಲ್ಲಿ ರಕ್ತದಾನದ ಮೂಲಕ ಮಾದರಿಯಾದ ಜನತೆ.