ಬುದ್ಧಿಶಕ್ತಿ ಹೆಚ್ಚಿಸುವ ಬೃಹತ್ ಫಲ ಬೂದುಗುಂಬಳ
ದೇಹದ ಕೊಬ್ಬನ್ನು ಕರಗಿಸುತ್ತದೆ.

ಜೀವಸಂಕುಲಗಳಲ್ಲಿ ಬುದ್ಧಿ ಇಲ್ಲದವರು ಪಶುವಿಗೆ ಸಮಾನ. ತಮ್ಮ ಮಕ್ಕಳು ಬುದ್ಧಿವಂತರಾಗಬೇಕು ಎನ್ನುವ ಆಸೆ ಯಾವ ತಂದೆ-ತಾಯಿಗಿಲ್ಲ? ಈ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ವಿಶಿಷ್ಟ ಔಷಧಿಗಳಿವೆ. ಮಾರುಕಟ್ಟೆಯಲ್ಲಿ ನೆನಪಿನ ಶಕ್ತಿ ಮತ್ತು ಬುದ್ಧಿಶಕ್ತಿ ಹೆಚ್ಚಿಸುವ ಔಷಧಿಗಳಿಗೆ ಮುಗಿಬೀಳುವ ಜನ, ಮನೆಯಲ್ಲಿರುವ ದಿವ್ಯ ಔಷಧಿಗಳನ್ನೇ ಮರೆತಿದ್ದಾರೆ. ನಮ್ಮ ಮನೆಗಳಲ್ಲಿ ದಿನನಿತ್ಯ ಬಳಸುವ ಕೆಲವು ಆಹಾರ ಪದಾರ್ಥಗಳು ಬುದ್ಧಿಶಕ್ತಿಯನ್ನು ಬಲಪಡಿಸುತ್ತವೆ. ಅಂಥಹ ತರಕಾರಿಯಲ್ಲಿ ಬೂದುಗುಂಬಳಕ್ಕೆ ಅಗ್ರಸ್ಥಾನ.
ತುಪ್ಪ, ಒಂದೆಲಗದ ಸೊಪ್ಪು, ಬಜೆ, ಬೂದುಗುಂಬಳಕಾಯಿ ಮುಂತಾದವು ಬುದ್ಧಿಯನ್ನು ಪ್ರಕಾಶಿಸುತ್ತವೆ. ಕರಾವಳಿಯ ಕಡೆ ಸಾಮಾನ್ಯ ತರಕಾರಿಯಂತೆ ಪ್ರತಿ ದಿನ ಬೂದುಗುಂಬಳವನ್ನು ಬಳಸುತ್ತಾರೆ. ಗೃಹ ಪ್ರವೇಶಗಳಲ್ಲಿ ಮನೆಗೆ ದೃಷ್ಟಿಯಾಗದಂತೆ ಮನೆ ಮುಂದೆ ಕಟ್ಟಲು, ದಸರಾ ಹಬ್ಬದಲ್ಲಿ ಬಲಿ ಕೊಡಲು, ಮದುವೆ ಮುಂಜಿಗಳಲ್ಲಿ ಸಿಹಿ ತಯಾರಿಸಲು, ದಾನ ಮಾಡಲು ಬೂದು ಗುಂಬಳಕಾಯಿ ಉಪಯೋಗ.

RELATED ARTICLES  ಈ ಮನೆ ಮದ್ದು ಉಪಯೋಗದಿಂದ ಸುಟ್ಟ ಗಾಯ ಮಂಗಮಾಯಾ!!

ಬೂದುಗುಂಬಳಕಾಯಿ ಪೋಷಕಾಂಶಗಳ ಕಣಜ. ಕಾರ್ಬೊಹೈಡ್ರೇಟ್, ಸಕ್ಕರೆ ಅಂಶ, ಫೈಬರ್, ಕೊಬ್ಬು, ಪ್ರೊಟೀನ್, ವಿಟಮಿನ್ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಸಿ, ಕ್ಯಾಲ್ಷಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ, ಸೋಡಿಯಂ ಮತ್ತು ಜಿಂಕ್ ಅಂಶಗಳಿವೆ. ಉರಿಯೂತ, ಹಿಸ್ಟಮಿನ್ ಪ್ರತ್ಯಾಮ್ಲ, ಅಲ್ಸರ್ ಇತ್ಯಾದಿಗಳ ವಿರುದ್ಧ ಹೋರಾಡುವ ಗುಣವನ್ನು ಇದು ಹೊಂದಿದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.

ಬೂದುಗುಂಬಳಕಾಯಿಯ ಎಲೆ, ಹೂ, ಕಾಯಿ, ಬೀಜ ಹೀಗೆ ಎಲ್ಲ ಭಾಗಗಳೂ ಉಪಯೋಗಕ್ಕೆ ಬರುತ್ತವೆ. ಕುಂಬಳಕಾಯಿಯ ಉಪಯೋಗ ಅದರ ಬೆಳವಣಿಗೆಯ ಮೇಲೆ ನಿರ್ಧಾರವಾಗುತ್ತದೆ. ಕುಂಬಳಕಾಯಿ ಬೀಜಗಳನ್ನು ತಿನ್ನಬಹುದು. ಇವು ಸಹ ಪ್ರೊಟೀನ್, ಜಿಂಕ್, ವಿಟಮಿನ್, ಮ್ಯಾಂಗನೀಸ್, ಪ್ರಾಸ್ಫರಸ್ ಅಂಶಗಳನ್ನು ಒಳಗೊಂಡಿವೆ ಮತ್ತು ಕೊಬ್ಬು ಕರಗಿಸುವ ಗುಣ ಹೊಂದಿವೆ. ಕುಂಬಳಕಾಯಿ ಬೀಜಗಳಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಇದು ರಕ್ತನಾಳ ಮತ್ತು ನರಗಳನ್ನು ಶಕ್ತಿಗೊಳಿಸುತ್ತದೆ.

RELATED ARTICLES  ಮೂಲವ್ಯಾಧಿ ಅಥವಾ ಹೆಮರಾಯ್ಡಗಳು ಬಗೆಗೆ ಇದೆ ಹಲವಾರು ಮಾಹಿತಿ.

ಬೂದು ಕುಂಬಳಕಾಯಿ ವಿಶೇಷವಾಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರ ರಸಕ್ಕೆ ಕೆಂಪು ಕಲ್ಲುಸಕ್ಕರೆ ಹಾಕಿ ಕುಡಿದರೆ ಪಿತ್ತದೋಷ ಕಡಿಮೆಯಾಗುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಖಾಲಿ ಹೊಟ್ಟೆಗೆ ರಸ ಕುಡಿಯುವುದರಿಂದ ವಿಶೇಷವಾಗಿ ಕರುಳಿನ ಹುಣ್ಣಿಗೆ ಉತ್ತಮ ಔಷಧಿ.

ಬೂದುಗುಂಬಳಕಾಯಿಯಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ ಮೂತ್ರವನ್ನು ಹೆಚ್ಚಿಸುವುದರಿಂದ ಮೂತ್ರಕೋಶವನ್ನು ಶುದ್ಧಿ ಮಾಡುತ್ತದೆ. ಉರಿಮೂತ್ರ, ಮೂತ್ರಕೋಶದಲ್ಲಿ ಕಲ್ಲು, ಮೂತ್ರ ತಡೆ ಮುಂತಾದ ಮೂತ್ರ ವಿಕಾರಗಳನ್ನು ನಿವಾರಿಸುತ್ತದೆ. ದೇಹದ ತೂಕ ಇಳಿಸಿಕೊಳ್ಳಲು ಹಾಗೂ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಬೂದುಗುಂಬಳ ಬಲು ಉಪಯೋಗಿ.

ಕೊಬ್ಬರಿ ಎಣ್ಣೆಯಲ್ಲಿ ಬೂದುಗುಂಬಳಕಾಯಿ ಸಿಪ್ಪೆಯನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ಬೆಳೆಯುತ್ತದೆ. ಒಣ ಮತ್ತು ಒರಟು ತಲೆಗೆ ಮೃದುತ್ವ ನೀಡುತ್ತದೆ