ಕುಮಟಾ : ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಮಂಗಳೂರು ಇವರ ಸಹಯೋಗದಲ್ಲಿ ಕುಮಟಾದ ಬಿ ಕೆ ಭಂಡಾರಕರ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವರಂಗ ಭೂಮಿ ದಿನಾಚರಣೆ ಹಾಗೂ ನೂತನವಾಗಿ ಅಸ್ತಿತ್ವಕ್ಕೆ ಬಂದ ರಂಗಸಾರಸ್ವತ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಉದ್ಘಾಟನೆಯನ್ನು ಮಾಡಿದ ಹಿರಿಯ ರಂಗಕರ್ಮಿ ಖ್ಯಾತ ಚಲನಚಿತ್ರ ನಟ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಉತ್ತರಕನ್ನಡ ಪ್ರತಿಭೆಗಳಿಂದ ತುಂಬಿರುವ ಜಿಲ್ಲೆಯಾಗಿದ್ದು ಇದರ ಸಂಪೂರ್ಣ ಪ್ರಯೋಜನ ಜಿಲ್ಲೆಗೆ ಆಗಬೇಕಿದೆ. ನಮ್ಮ ನಡುವಿನ ಪ್ರತಿಭೆಗಳನ್ನು ಗುರುತಿಸಿ ಗೌತವಿಸಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ರಂಗ ಚಟುವಟಿಕೆಗಳ ಬಗ್ಗೆ ಒಲವು ಮೂಡಿಸ ಬೇಕಾಗಿದೆ ಕಲಿಕೆ ಎಂದರೆ ಕೇವಲ ಅಂಕ ಗಳಿಕೆ ಆಗಬಾರದು ಜೀವನ ಶಿಕ್ಷಣಕ್ಕೆ ರಂಗಕಲೆಗಳು ಬಹಳ ಪ್ರಯೋಜನ ನೀಡುತ್ತದೆ ಎಂದರು. ರಂಗಸಾರಸ್ವತದ ಸ್ಥಾಪನೆಯ ಉದ್ದೇಶವನ್ನು ಮನವರಿಕೆ ಮಾಡಿಕೊಡುತ್ತ ಈ ಸಂಘಟನೆಯು ರಂಗಭೂಮಿ, ಸಾಹಿತ್ಯ, ಸಂಗೀತ ಮುಂತಾದ ಕಲೆಗಳ ಉಳಿಯುವಿಕೆಗೆ ಬೆಳಸುವಿಕೆಗೆ ಪರಿಶಮ ಪಡಲಿದೆ ಇದನ್ನು ಸಹೃದಯಿಗಳು ಪ್ರೋತ್ಸಾಹಿಸಬೇಕೆಂದರು. ರಂಗಸಾರಸ್ವತ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಬರೆಯುವಂತಾಗಲಿ ಎಂದು ಶುಭಕೋರಿದರು.
ಮುಖ್ಯ ಅತಿಥಿಗಳಾದ ವಿನೋದ ಪ್ರಭು ಅವರು ನೂತನ ಸಂಘಟನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶುಭಕೋರಿದರು.
ಚಲನ ಚಿತ್ರ ನಿರ್ಮಾಪಕರು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸುಬ್ರಾಯ ವಾಳ್ಕೆಯವರು ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿ ಅತ್ಯುತ್ತಮ ಅಂಕಗಳಿಸಬೇಕು ಜೊತೆಗೆ ಸಂಗೀತ ನಾಟಕ ಮೊದಲಾದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲೂ ಸಾಧನೆ ಗೈಯಬೇಕೆಂದರು. ಹಾಗೂ ಹಿರಿಯ ರಂಗ ಕಲಾವಿದರಾದ ಕಾಸರಗೋಡು ಚಿನ್ನಾ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುರಳೀಧರ ಪ್ರಭು ಅವರು ತಮ್ಮ ಸಂಸ್ಥೆಯಲ್ಲಿ ಪ್ರತಿಭಾವಂತ ಶಿಕ್ಷಕರ ಸಮೂಹವೇ ಇದೆ.ರಂಗಸಾರಸ್ವತದ ಉದ್ದೇಶ ಯಶಸ್ವಿಯಾಗಬೇಕು.ವಿದ್ಯಾರ್ಥಿಗಳು ರಂಗಕಲೆಗಳನ್ನು ಮೈಗೂಡಿಸಿಕೊಳ್ಳಬೇಕು.
ಅಘನಾಶಿನಿ ನದಿ ಅತ್ಯಂತ ಮಹತ್ವದ ನದಿಯಾಗಿದ್ದು ಇದರ ವಿಶೇಷತೆಯನ್ನು ಸರ್ವರೂ ಅರಿಯುವಂತಾಗಬೇಕು.ಈ ನದಿಯನ್ನು ಆಧರಿಸಿ ರಂಗಸಾರಸ್ಚತದ ಮುಖಾಂತರ ವಿಶೇಷ ರಂಗಕಾರ್ಯಕ್ರಮ ಹಮ್ಮಿಕೊಳ್ಳುವ ದಿಸೆಯಲ್ಲಿ ಯೋಚಿಸಬೇಕು. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಜೀವನ ನಾಟಕರಂಗದ ಕಲಾವಿದರೇ ಎಂದು ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಹಿರಿಯ ರಂಗಕಲಾವಿದರಾದ ಕೃಷ್ಣಾನಂದ ಭಟ್ಡ ಉಪ್ಲೆ ಅವರನ್ನು ಹಾಗೂ ವಾಸುದೇವಾಚಾರ ದತ್ತಿ ನಿಧಿ ಪುರಸ್ಕಾರ ಪಡೆದ ಶ್ರೀಧರ ಉಪ್ಪಿನ ಗಣಪತಿ ಮತ್ತು ಶಿಕ್ಷಕಿ ಜಯಾ ಶಾನಭಾಗ ಅವರನ್ನು ಸನ್ಮಾನಿಸಲಾಯಿತು.
ಚಲನಚಿತ್ರ ವಿತರಕರಾದ ಟಿ ಎ ಶೀನಿವಾಸ್ ಮಂಗಳೂರು, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಂಗಸಾರಸ್ವತದ ಆಡಳಿತ ನಿರ್ದೇಶಕ ಕಾಗಾಲ ಚಿದಾನಂದ ಭಂಡಾರಿ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ದೇಶಕ ಅರುಣ ಮಣಕೀಕರ್ ವಂದನಾರ್ಪಣೆ ಗೈದರು. ಉಪನ್ಯಾಸಕ ಪದ್ಮನಾಭ ಪ್ರಭು ಪ್ರಾರ್ಥನೆಗೈದರು. ಶಿಕ್ಷಕ ಗಣೇಶ ಜೋಶಿ ಸಂಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು.