ಭಟ್ಕಳ : ತಾಲೂಕಿನ ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ದಾಖಲೆ ಇಲ್ಲದೇ ಲಕ್ಷಾಂತರ ಮೌಲ್ಯದ ಅಕ್ರಮ ಹಣವನ್ನು ಕಾರಿನಲ್ಲಿ ಸಾಗಿಸುವುದು ಬೆಳಕಿಗೆ ಬಂದಿದ್ದು. ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಯಶ್ವಂತ ಸುಕ್ರ ಗೊಂಡ ಕಟಗಾರಕೊಪ್ಪ ಭಟ್ಕಳ, ಶ್ರೀನಿವಾಸ ನಾರಾಯಣ ಗೌಡ ಗುಣವಂತೆ ಹೊನ್ನಾವರ, ರಘು ಅನಂತ ನಾಯ್ಕ ಈ ಮೂವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡವರು ಎಂದು ತಿಳಿದು ಬಂದಿದೆ.

RELATED ARTICLES  ಕುವೆಂಪು ನಾಡಗೀತೆಗೆ ಸಿ ಅಶ್ವತ್ ಸಂಯೋಜನೆ ಅತ್ಯಂತ ಹೆಚ್ವು ಸೂಕ್ತ - ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ

ನಗರ ಠಾಣೆಯ ಪಿಎಸ್‌ಐ ಸಂತೋಷ ಹಾಗೂ ಸಿಬ್ಬಂದಿಗಳು ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ್ ಬಳಿ ತಪಾಸಣೆಗೆ ನಿಂತ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಭಟ್ಕಳ ಕಡೆಗೆ ಇಕೋ ಕಾರನಲ್ಲಿ 14,90,125 ಲಕ್ಷ ಮೊತ್ತದ ಯಾವುದೇ ದಾಖಲೆ ಇಲ್ಲದ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ತಪಾಸಣೆಯ ಮಾಡಿದಾಗ ಮೂವರು ಆರೋಪಿಗಳು ಹಣವನ್ನು ಮುರುಡೇಶ್ವರದ ಕಡೆಗೆ ಸಾಗಿಸುತ್ತಿರುವುದಾಗಿ ಪೋಲಿಸರಲ್ಲಿ ತಿಳಿಸಿದ್ದಾರೆ. ಮೂವರು ಆರೋಪಿಗಳೊಂದಿಗೆ, ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಗೋಲ್ ಇಂಟರ್ನ್ಯಾಶನಲ್ ಪಬ್ಲಿಕ್ ಶಾಲೆಗೆ ಎಕ್ಸಲೆನ್ಸ್ ಇನ್ ಅಕಾಡಮಿಕ್ಸ್ ಅವಾರ್ಡ್.