ಯಲ್ಲಾಪುರ : ರಸ್ತೆಯಲ್ಲಿ ಸಿಕ್ಕ ಅಮೂಲ್ಯ ದಾಖಲೆಗಳನ್ನು ಹೊಂದಿದ್ದ ಬ್ಯಾಗ್ ಅನ್ನು ಬ್ಯಾಗ್‌ನ ಮೂಲ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಯುವಕನೋರ್ವ ಪ್ರಾಮಾಣಿಕತೆ ಮೆರೆದಿದ್ದಾನೆ. ಮಾ.17ರಂದು ಅಂಕೋಲಾದಿಂದ ಯಲ್ಲಾಪುರಕ್ಕೆ ಹೊಸಜೀವನ ಸಂಸ್ಥೆಯ ಸಿಬ್ಬಂದಿಯೊಬ್ಬರು ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದುಹೋಗುವಾಗ ಬೈಕಿನಲ್ಲಿದ್ದ ಬಣ್ಣದ ಬ್ಯಾಗ್ ಆಕಸ್ಮಿಕವಾಗಿ ಕಾಣೆಯಾಗಿತ್ತು. ಕಾಗದ ಪತ್ರಗಳನ್ನು ಹಾಗೂ ಪರ್ಸ್ ಹೊಂದಿದ್ದ ಕಪ್ಪು
ಸುನೀಲ್ ಸುರೇಶ ಗೋಸಾವಿಯವರಿಗೆ ಅಂಕೋಲಾ ತಾಲೂಕಿನ ವಜ್ರಳ್ಳಿ ಸಮೀಪ ಈ ಬ್ಯಾಗ್ ಹೆದ್ದಾರಿ ಅಂಚಿನಲ್ಲಿ ಬಿದ್ದಿರುವುದು ಸಿಕ್ಕಿತ್ತು. ಸುನೀಲ್ ಗೋಸಾವಿಯವರು ತಮಗೆ ಸಿಕ್ಕಿದ್ದ ಈ ಬ್ಯಾಗ್ಅನ್ನು ಸುರಕ್ಷಿತವಾಗಿ ಮೂಲ ವಾರಸುದಾರರಿಗೆ ರವಿವಾರ
ಹಸ್ತಾಂತರಿಸಿದ್ದಾರೆ.