ಕಾರವಾರ : ಇಲ್ಲಿನ ಓಲ್ಡ್ ಸಿವಿಲ್ ಹಾಸ್ಪಿಟಲ್ ಸಮೀಪದ ನಿವಾಸಿ ಸುಲೋಕ ಸುಭಾಷ ಚಂಡೇಕರ(15) ಎಂಬ ಬಾಲಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲ್ವೆ ಹಳಿಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಸುಲೋಕ್ ಎನ್ನುವ ಬಾಲಕ ಕಳೆದ ಮಾರ್ಚ್ 18 ರಂದು ಸಂಜೆ 5: 45 ರ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೆ ಕೇಳದೇ ತೆರಳಿದ್ದ. ಆತನು ಅಪ್ರಾಪ್ತ ವಯಸ್ಸಿನವನಾಗಿರುವುದರಿಂದ ಆತನನ್ನು ಯಾರಾದರೂ ಪುಸಲಾಯಿಸಿ ಎಲ್ಲಿಗಾದರೂ ಕರೆದುಕೊಂಡು ಹೋಗಿರಬಹುದಾದ ಸಾಧ್ಯತೆ ಇರಬಹುದೆನುವ ಶಂಕೆಯ ಮೇರೆಗೆ ಆತನ ತಂದೆ ಸುಭಾಷ ಚೆಂಡೇಕರ್ ತಮ್ಮಮಗ
ನಾಪತ್ತೆಯಾಗಿದ್ದಾನೆಂದು ಪೊಲೀಸ್ ದೂರು ನೀಡಿದ್ದರು. ಆದರೆ ಮಾ.29 ರಂದು ಸುಲೋಕ್ ಹೆಣವಾಗಿ ಸುರತ್ಕಲ್ ರೈಲು ಹಳಿಯ ಬಳಿ ಬಿದ್ದಿದ್ದಾನೆ.ಸಾವು ಹೇಗಾಯಿತು ಎನ್ನುವ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಆತ ಭಟ್ಕಳ ಮಾರ್ಗವಾಗಿ ತೆರಳಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ. ಬುಧವಾರದಂದು ಸುಲೋಕ್ ಶವ ಛಿದ್ರ ಸ್ಥಿತಿಯಲ್ಲಿ ರೈಲ್ವೆ ಹಳಿಯ ಬಳಿ ಕಂಡು ಬಂದಿದೆ.