ಶಿರಸಿ: ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭಾನುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿವ ಮೂಲಕ ಕಾಂಗ್ರೆಸ್ ಸೇರ್ಪಡೆಯ ದಾರಿ ಸುಗಮ ಮಾಡಿಕೊಂಡರು. ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಕಚೇರಿಗೆ ಬಂದ ಶಿವಲಿಂಗೇಗೌಡ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಈ ವೇಳೆ ಕಾಗೇರಿ ಹಾಗೂ ಶಿವಲಿಂಗೇಗೌಡ ಅವರು ವಿಧಾನಸಭೆ ಅಧಿವೇಶನದ ವೇಳೆ ಜನಪರವಾಗಿ ಆಡಿದ ಮಾತುಗಳನ್ನು ಪರಸ್ಪರ ಶ್ಲಾಘಿಸಿದರು. ಶಿವಲಿಂಗೇಗೌಡರ ಜೊತೆ 300ಕ್ಕೂ ಅಧಿಕ ಬೆಂಬಲಿಗರು ಆಗಮಿಸಿದ್ದರು.

RELATED ARTICLES  ಗೋವಿನ ಉಳಿವಿಗೆ ಹಾಲು ಹಬ್ಬ.

2008ರಲ್ಲಿ ಮೊದಲ ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದ ಅವರು 2018ರ ಚುನಾವಣೆಯಲ್ಲಿ ಅರಸಿಕೆರೆ ವಿಧಾನಸಭೆ ಕ್ಷೇತ್ರದಲ್ಲಿ 93,986 ಮತಗಳನ್ನು ಪಡೆದು ಜಯಗಳಿಸಿದ್ದರು. ಪಕ್ಷದಲ್ಲಿ ನಿರೀಕ್ಷಿತ ಮನ್ನಣೆ, ಸ್ಥಾನಮಾನ ಸಿಗದ ಕಾರಣ ಅವರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದರು.

RELATED ARTICLES  ಕಾಂಗ್ರೆಸ್‌ನವರು ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವ ಮೂಲಕ ಜಿಲ್ಲಾಧಿಕಾರಿ ನೀಡಿರುವ ಆದೇಶ ಉಲ್ಲಂಘಿಸಿದ್ದಾರೆ : ಬಿ ಜೆ ಪಿ.

‘ಯಾವ ನನ್‌ ಮಗ ಅಡ್ಡ ಬಂದ್ರೂ ನಾನು ಕಾಂಗ್ರೆಸ್‌ನಲ್ಲಿ 50 ಸಾವಿರ ಲೀಡಲ್ಲಿ ಗೆಲ್ತೀನಿ. ಜೆಡಿಎಸ್‌ನಿಂದ ಯಾರೇ ನಿಂತರೂ ನನ್ನ ಗೆಲುವಿಗೆ ಅಡ್ಡಿಯಿಲ್ಲ. ಜನ ದೊಡ್ಡವರ ಮುಖ ನೋಡಿ ಓಟು ಹಾಕಲ್ಲ’ ಎಂಬ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೊ ಇತ್ತೀಚೆಗೆ ರಾಜಕೀಯ ಪಡಸಾಲೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.