ಹೊನ್ನಾವರ : ಕುಮಟಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಘೋಷಣೆ ಮೊದನೆ ಪಟ್ಟಿಯಲ್ಲಿ ಬಿಡುಗಡೆ ಆಗದೆ ಇರುವುದರೊಂದಿಗೆ ಆಕಾಂಕ್ಷಿಯಾಗಿ ಗುರುತಿಸಿ ಕೊಳ್ಳದೆ ಕೊನೆಯ ಕ್ಷಣದಲ್ಲಿ ತಾನೂ ಆಕಾಂಕ್ಷಿ. ತಾನೇ ಈ ಬಾರಿಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಉಳಿದ ಆಕಾಂಕ್ಷಿಗಳನ್ನ ಮತ್ತು ಕಾರ್ಯಕರ್ತರನ್ನ ಭೇಟಿಯಾಗುತ್ತಿರುವ ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಮಗ ನಿವೇದಿತಾ ಆಳ್ವಾ ವಿರುದ್ದ ಹೊನ್ನಾವರ ತಾಲೂಕಿನ ಯುವ ಘಟಕದ ಪದಾದಿಕಾರಿಗಳು ಹಲವು ಗ್ರಾಮ ಪಂಚಾಯತ ಅಧ್ಯಕ್ಷರು ಸದಸ್ಯರು, ಬ್ಲಾಕ್ ಅಧ್ಯಕ್ಷರು ಬೆರೆ ಬೆರೆ ವಿಭಾಗದ ಪದಾದಿಕಾರಿಗಳು ಹಿರಿಯ ಕಿರಿಯ ಮುಖಂಡರು ಹಳದಿಪುರದಲ್ಲಿ ಸಭೆ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಹಿರಿಯ ಮುಖಂಡರಿಗೆ ಪಕ್ಷದ ಜಿಲ್ಲಾ ಮತ್ತು ರಾಜ್ಯಮಟ್ಟದ ಪದಾದಿಕಾರಿಗಳಿಗೆ ಕಾರ್ಯಕರ್ತರ ಮನಸ್ಥಿತಿ ಮತ್ತು ಪರೀಸ್ಥಿಯನ್ನ ಅರಿತು ಯಾವುದೇ ಕಾರಣಕ್ಕೂ ನಿವೇದಿತಾ ಆಳ್ವಾ ಅವರಿಗೆ ಟಿಕೆಟ್ ನೀಡಬಾರದು , ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿ ಕೊಂಡಿರುವ , ಕಾರ್ಯಕರ್ತರ ಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸುತ್ತಿರುವ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಶಿವಾನಂದ ಹೆಗಡೆ ಕಡತೋಕಾ ಅಥವಾ ಮಂಜುನಾಥ ನಾಯ್ಕ ಅವರಲ್ಲಿ ಯಾರಿಗೆ ಟಿಕೆಟ್ ನೀಡಿದರು ತಾವು ಪಕ್ಷದ ಪರವಾಗಿ, ಕೆಲಸ ಮಾಡುವುದಾಗಿ ತಿಳಿಸಿದ್ದಾರೆ ಅದರ ಹೊರತಾಗಿ ನಿವೇದಿತಾ ಆಳ್ವಾ ಅವರಿಗಾಗಲಿ, ಅಥವಾ 13 ಜನ ಆಕಾಂಕ್ಷಿಗಳಲ್ಲಿ ಒಬ್ಬರು ತಮ್ಮ ಪಕ್ಷದ ವಿರುದ್ದವೇ ಪಕ್ಷತರರಾಗಿ ಸ್ಪರ್ಧಿಸಿದ್ದು ಮತ್ತು ಅವರೋಂದಿಗೆ ಇನ್ನೋರ್ವ ಮುಖಂಡ ಅವರಿಗೆ ಸಹಕಾರ ನೀಡಿ ಪಕ್ಷದ್ರೋಹ ಕೆಲಸ ಮಾಡಿದ್ದು ಅವರಿಗೆ ಅವಕಾಶ ನೀಡಬಾರದು ಅಲ್ಲದೆ ಈ ಬಾರಿಯೂ ನಿವೇದಿತಾ ಆಳ್ವಾ ಕರೆತಂದು ಪಕ್ಷದಲ್ಲಿ ಗೊಂದಲ ಸೃಷ್ಟಿಸಿ ಗೆಲುವಿಗೆ ಅವಕಾಶ ಇರುವ ಸಂದರ್ಭದಲ್ಲಿ ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಅನ್ಯಾಯ ಮಾಡುತ್ತಿರುವ ಮುಖಂಡನಿಗೆ ಅವಕಾಶ ನೀಡಬಾರದು, ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದ್ದಾರೆ ಅಲ್ಲದೆ ತಮ್ಮ ಭಾವನೆಗೆ ಮನ್ನಣೆ ನೀಡದೇ ಹೈ ಕಮಾಂಡ ಅವರು ನಿರ್ಧಾರ ತಡಗೆದುಕೊಂಡರೆ ಮುಂಬರುವ ಚುನಾವಣೆಯಲ್ಲಿ ಸಾಮೂಹಿಕ ರಾಜನಾಮೆ ನೀಡುವುದಾಗಿ ತಿಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ತಾಲೂಕಾ ಯುವ ಘಟಕದ ಅಧ್ಯಕ್ಷ ಸಂದೇಶ ಶೇಟ್ ಮಾತನಾಡಿ ತನಗೆ ಬೆದರಿಕೆ ಕರೆಗಳು ಬರುತ್ತಿವೆ. ಪಕ್ಷದ ನಿರ್ಣಯದ ವಿರುದ್ದ ಮಾತನಾಡಿದರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗುತ್ತಿದೆ , ಆದರೆ ನನಗೆ ನನ್ನ ಪಕ್ಷದ ಹಿತ ಮುಖ್ಯ , ಕಾರ್ಯಕರ್ತರ ಭಾವನೆಗಳು ಮುಖ್ಯ ಪಕ್ಷದ ಓಳಿತಿಗಾಗಿ ನಾನು ಮಾಡುತ್ತಿರುವ ಹೋರಾಟಕ್ಕೆ ರಾಜಿನಾಮೆ ಅನಿವಾರ್ಯವಾದರೆ ನಾನು ಕಿಸೆಯಲ್ಲಿ ರಾಜಿನಾಮೆ ಪತ್ರ ಇಟ್ಟುಕೊಂಡೆ ಓಡಾಡುತ್ರಿದ್ದೇನೆ ಅದಕ್ಕೂ ಸಿದ್ದನಾಗೇ ಇದ್ದೇನೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಒಬ್ಬ ಶಿಸ್ತು ಸಮೀತಿಯ ಸದಸ್ಯನಾಗಿ, ಈ ಮೊದಲೂ ತಾನು ಆಕಾಂಕ್ಷಿ ಎಂದು ಉಳಿದವರ ಹಾಗೆ ಅರ್ಜಿ ಸಲ್ಲಿಸದೆ, ಇಲ್ಲಿಯ ವರೆಗೆ ಎಲ್ಲಿಯೂ ಪಕ್ಷ ಸಂಘನೆಯಲ್ಲಿ ತಮ್ಮನ್ನ ತೊಡಗಿಸಿಕೊಳ್ಳದೆ ಈಗ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳುತ್ತಿರುವುದು ನಮ್ಮ ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ನಿವೇದಿತಾ ಆಳ್ವಾ ಮತ್ರು ಪಕ್ಷದ ಹಿರಿಯ ಮುಖಂಡರು ಮಾಡುತ್ತಿರುವ ಅನ್ಯಾಯ, ಇದನ್ನ ಅರ್ಥಮಾಡಿಕೊಂಡು ಹಿರಿಯರು ನಡುವೆ ವೇದಿತಾ ಆಳ್ವಾ ಅವರಿಗೆ ಟಿಕೆಟ್ ನೀಡುವ ವಿಚಾರವನ್ನ ಬದಲಿಸಿ ಪ್ರಭಲ ಆಕಾಂಕ್ಷಿಗಳಲ್ಲಿ ಒಬ್ಬರಿಗೆ ಅವಕಾಶ ನೀಡಿದರೆ ನಾವು ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸುತ್ತೇವೆ ಎಂಬ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ
ಈ ಸಂದರ್ಭದಲ್ಲಿ ಸಂದೇಶ್ ಶೆಟ್ಟಿ ಯುವ ಕಾಂಗ್ರೆಸ್ ಅಧ್ಯಕ್ಷರು ಹೊನ್ನಾವರ, ಗೌರಿ ಕೃಷ್ಣ ಅಂಬಿಗ
ಗ್ರಾಮ ಪಂಚಾಯತ್ ಅಧ್ಯಕ್ಷರು,ಮುಗ್ವಾ, ಅಕ್ಷಯ್ ಮಂಜುನಾಥ್ ನಾಯ್ಕ್ ಕಾಂಗ್ರೆಸ್ ಯಂಗ್ ಬ್ರಿಗೇಡ್ ಸೇವಾದಳ ಜಿಲ್ಲಾಧ್ಯಕ್ಷರು, ಪುಷ್ಪ ಮಹೇಶ್ ನಾಯ್ಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹೊನ್ನಾವರ ಗಣಪತಿ ಮೇಸ್ತ, ನಾರಾಯಣಪ್ಪ ಗೌಡ ತಾಲೂಕ ಪಂಚಾಯತ್ ಮಾಜಿ ಸದಸ್ಯರು, ಇಮಾಮ್ ಗಣಿ ಸಾಬ, ಗ್ರಾಮ ಪಂಚಾಯತಿ ಸದಸ್ಯರು ಚಂದಾವರ, ರವಿ ಮೊಗೆರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಹಳದಿಪುರ ನವೀನ್ ನಾಯ್ಕ್ ಗ್ರಾಮ ಪಂಚಾಯತಿ ಸದಸ್ಯರು ಹಳದಿಪುರ, ಮಾದೇವಿ ನಾಯ್ಕ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ನವಿಲ್ಗೋಣ, ಶ್ರೀನಾಥ್ ಶೆಟ್ಟಿ, ಕಾಂಗ್ರೆಸ್ ಮುಖಂಡರು, ಕಡತೋಕ, ವಸಂತ ಗೌಡ, ಕಾಂಗ್ರೆಸ್ ಮುಖಂಡರು, ಬಗ್ಗೋಣ, ಈಶ್ವರ ಮುಕ್ರಿ
ಕಾಂಗ್ರೆಸ್ ಮುಖಂಡರು ಬಾಸ್ಕೇರಿ, ಮಂಗಳ ಮುಕ್ರಿ
ಗ್ರಾಮ ಪಂಚಾಯಿತಿ ಸದಸ್ಯರು ಕಡತೋಕ, ಲಕ್ಷ್ಮಿ ಮುಕ್ರಿ
ಗ್ರಾಮ ಪಂಚಾಯಿತಿ ಸದಸ್ಯರು ನವಿಲುಗೋಣ, ಕಿರಣ್ ಭಂಡಾರಿ, ಕಾಂಗ್ರೆಸ್ ಮುಖಂಡರು , ರಾಘವೇಂದ್ರ ದೇಶಬಂಡಾರಿ, ವಿನೋದ್ ಗೋಪಾಲ್ ನಾಯ್ಕ ವಿಷ್ಣು ಸಭಾಹಿತ ಕಾಂಗ್ರೆಸ್ ಮುಖಂಡರು ಕಡ್ಲೆ, ಕೇಶವ್ ಮೇಸ್ತ
ಇಂಟೆಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಂಜುನಾಥ್ ಶಾನಬಾಗ್, ಕರ್ಕಿ, ಆರ್. ಕೆ. ಮೇಸ್ತ, ಚಂದ್ರು, ಗ್ರಾಮ ಪಂಚಾಯಿತಿ ಸದಸ್ಯರು ಚಂದಾವರ ವಿನಯ ನಾಯ್ಕ್
ಗ್ರಾಮ ಪಂಚಾಯಿತಿ ಸದಸ್ಯರು ಚಂದಾವರ ಗಿರೀಶ್ ಗೌಡ ಗ್ರಾಮ ಪಂಚಾಯಿತಿ ಸದಸ್ಯರು ಹಳದಿಪುರ , ಮುರಳಿ ಶೇಟ್, ಪ್ರವೀಣ ನಾಯ್ಕ್ ಇತರರು ಇದ್ದರು.