ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಪವಿತ್ರ ಶರಾವತಿ ನದಿ ತಟದಲಿ ಪರಮಪೂಜ್ಯ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಶರಾವತಿ ಆರತಿ’ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಜಾತ್ರಾ ಮಹೋತ್ಸವದ ಒಂದು ಭಾಗವಾಗಿ ಶರಾವತಿ ನದಿ ದಡದಲ್ಲಿ ‘ಶರಾವತಿ ಕುಂಭ’ವನ್ನು ಆಯೋಜಿಸಲಾಗಿದ್ದು, ಸಾಧು-ಸಂತರನ್ನೊಡಗೂಡಿ ಭಕ್ತಾದಿಗಳಿಗೆ ತ್ರಿಕಾಲ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

RELATED ARTICLES  ನಾಯಿ ತಪ್ಪಿಸಲು ಹೋಗಿ ಸ್ಕೂಟಿ ಪಲ್ಟಿ : ಗಂಭೀರ ಗಾಯ.

ಪುಣ್ಯನದಿ ಶರಾವತಿಯನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೂಜಿಸಿ ಗೌರವಿಸುವ ಉದ್ದೇಶದಿಂದ ಶರಾವತಿ ಕುಂಭದ ಸಂದರ್ಭದಲ್ಲಿ ಪ್ರತಿವರ್ಷವು ‘ಶರಾವತಿ ಆರತಿ’ಯನ್ನು ಆಯೋಜಿಸಿಕೊಂಡು ಬಂದಿದ್ದು ಈ ವರ್ಷವು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಾನಿಧ್ಯದಲ್ಲಿ ಸಾಧು-ಸಂತರು, ಪುರೋಹಿತರು, ಭಕ್ತಾದಿಗಳು ಶರಾವತಿ ಮಾತೆಗೆ ಆರತಿ ಬೆಳಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

RELATED ARTICLES  ಹಿರಿಯ ವೈದಿಕರಾದ ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಇನ್ನಿಲ್ಲ.