ನವದೆಹಲಿ: ಜನರ ದೈನಂದಿನ ಜೀವನದಲ್ಲಿ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮಾವಳಿಗಳನ್ನು ತಂದಿದೆ. ಹೊಸದಾಗಿ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಆಧಾರ್ ತಿದ್ದುಪಡಿಗೆ ದಾಖಲಾತಿಗಳನ್ನು​ ಸಲ್ಲಿಸಬೇಕಾಗಿದೆ.

ಆಧಾರ್ ತಿದ್ದುಪಡಿಗೆ ಹೊಸ ನಿಯಮ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಬ್ಬ ವ್ಯಕ್ತಿಯೂ ಆಧಾರ್ ಕಾರ್ಡ್ ಹೊಂದುವುದನ್ನು ಕಡ್ಡಾಯಗೊಳಿಸಿದೆ. ಕಲ್ಯಾಣ ಯೋಜನೆಗಳ ಮಂಜೂರಾತಿ, ಜಮೀನು ನೋಂದಣಿ, ಬ್ಯಾಂಕ್ ಪಾಸ್‌ಬುಕ್, ಉದ್ಯೋಗ ಖಾತರಿ ಕಾಮಗಾರಿಗಳ ರಚನೆ, ಜಮೀನು ಮಾರಾಟ, ವಿದ್ಯಾರ್ಥಿಗಳ ಅಧ್ಯಯನ, ವಿದ್ಯಾರ್ಥಿವೇತನ ಮತ್ತು ಬೆಳೆಗಳ ಮಾರಾಟಕ್ಕೆ ಆಧಾರ್ ಕಡ್ಡಾಯವಾಗಿದೆ. ಈ ಹಿಂದೆ ಆಧಾರ್​ ತಿದ್ದುಪಡಿ ಮಾಡುವುದು ಸುಲಭವಾಗಿತ್ತು. ನಯುತ್ತಿರುವ ವಂಚನೆಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಮೂರು ವಿಭಾಗಗಳು: ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡುವವರ ವಯಸ್ಸಿಗೆ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ವಿಭಜನೆ ಹಿಂದೆ ಇರಲಿಲ್ಲ. ಎರಡು ರೀತಿಯ ಅರ್ಜಿ ದಾಖಲೆಗಳಿದ್ದವು. ಇತ್ತೀಚೆಗೆ, ಐದು ವರ್ಷದೊಳಗಿನ ಮಕ್ಕಳನ್ನು ಮೊದಲ ವರ್ಗಕ್ಕೆ, ಐದರಿಂದ 18 ವರ್ಷದೊಳಗಿನ ಮಕ್ಕಳನ್ನು ಎರಡು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮೂರನೇ ವರ್ಗಕ್ಕೆ ವಿಂಗಡಿಸಲಾಗಿದೆ. ಅವರಿಗಾಗಿ ಪ್ರತ್ಯೇಕ ಅರ್ಜಿಗಳನ್ನು ಸಿದ್ಧಪಡಿಸಲಾಗಿದೆ.

RELATED ARTICLES  Job News : ವೃತ್ತಿ ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು

ಪ್ರತಿ ಹತ್ತು ವರ್ಷಗಳಿಗೊಮ್ಮೆ ನವೀಕರಣ: ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ನವೀಕರಿಸಬೇಕು. ಸ್ಥಳ ಖಚಿತಪಡಿಸಿಕೊಳ್ಳಲು ವಿಳಾಸವನ್ನು ನೋಂದಾಯಿಸಬೇಕು. ಅಗತ್ಯವಿರುವ ವಿಳಾಸ ಪುರಾವೆಗಳನ್ನು ಲಗತ್ತಿಸಬೇಕು. ಮೊದಲು ಗೆಜೆಟೆಡ್ ಅಧಿಕಾರಿಯ ಸಹಿಯೊಂದಿಗೆ ವ್ಯಕ್ತಿಯ ಹೆಸರು, ತಂದೆಯ ಹೆಸರು, ವಿಳಾಸ ಮತ್ತು ಜನ್ಮ ದಿನಾಂಕವನ್ನು ಬದಲಾಯಿಸಲು ಅವಕಾಶವಿತ್ತು. ಪ್ರಸ್ತುತ ನಗರಸಭೆ ಆಯುಕ್ತರು ಹಾಗೂ ತಹಸೀಲ್ದಾರ್ ನೀಡಿರುವ ಗುರುತಿನ ದಾಖಲೆ ತೋರಿಸಬೇಕು. ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್, ಪಡಿತರ ಚೀಟಿಯನ್ನು ಸರಿಯಾದ ವಿಳಾಸದೊಂದಿಗೆ ಸರಿಪಡಿಸಬಹುದು. ನೀರಿನ ತೆರಿಗೆ, ವಿದ್ಯುತ್, ದೂರವಾಣಿ ಬಿಲ್, ಗ್ಯಾಸ್ ಸಂಪರ್ಕ ಪ್ರಮಾಣಪತ್ರಗಳನ್ನು ಬಳಸಬಹುದಾಗಿದೆ.

  • ಹೆಸರು ಬದಲಾಯಿಸಲು: ಮೊದಲು ಹೆಸರು ಬದಲಾಯಿಸಲು ಫೋಟೋ ಐಡಿ ಸಲ್ಲಿಸಬೇಕು. 10ನೇ ತರಗತಿಯ ಅಂಕಪಟ್ಟಿ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಉದ್ಯೋಗ ಖಾತರಿ ಜಾಬ್ ಕಾರ್ಡ್, ಇವುಗಳಲ್ಲಿ ಯಾವುದಾದರೂ ಒಂದು ಪ್ರಮಾಣ ಪತ್ರ ಲಗತ್ತಿಸಬೇಕು. ನೌಕರರು ಗುರುತಿನ ಚೀಟಿ, ಮದುವೆಯಾಗಿದ್ದರೆ ಮದುವೆ ಪ್ರಮಾಣ ಪತ್ರ, ತಹಸೀಲ್ದಾರ್ ನೀಡಿರುವ ಜಾತಿ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ.
  • ಜನ್ಮ ದಿನಾಂಕ..: ಈ ಹಿಂದೆ ಜನ್ಮದಿನಾಂಕವನ್ನು ಬದಲಾಯಿಸುವುದಕ್ಕೆ ದಾಖಲೆಗಳ ಪತ್ರಗಳನ್ನು ಭರ್ತಿ ಮಾಡಿ ಗೆಜೆಟೆಡ್​ ಅಧಿಕಾರಿಗಳ ಸಹಿ ಹಾಕಿದರೆ ಸಾಕಾಗುತ್ತಿತ್ತು. ಆದರೆ ಹೊಸ ನಿಯದಲ್ಲಿ ಬೇರೆಯಾಗಿದೆ. ಮಕ್ಕಳಿದ್ದಲ್ಲಿ ಪುರಸಭೆ ಅಥವಾ ಪಂಚಾಯತ್ ನೀಡಿದ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಇದನ್ನು ಸಹ ಒಮ್ಮೆ ಮಾತ್ರ ಮಾರ್ಪಡಿಸಲು ಅನುಮತಿಸಲಾಗಿದೆ. ನೀವು ಎರಡನೇ ಬಾರಿಗೆ ಬದಲಾವಣೆ ಮಾಡಲು ಬಯಸಿದರೆ ದೆಹಲಿಯ ಕೇಂದ್ರ ಕಚೇರಿಗೆ ಹೋಗಿ ಪೂರಕ ದಾಖಲೆಗಳನ್ನು ಸಲ್ಲಿಸಿ ನಿಮ್ಮ ಜನ್ಮ ದಿನಾಂಕವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
  • ಲಿಂಗ ಬದಲಾಯಿಸಲು..: ನಿಮ್ಮ ಆಧಾರ್​ ಕಾರ್ಡ್​ನಲ್ಲಿ ಪುರಷ ಅಥವಾ ಮಹಿಳೆ ಜಾಗದಲ್ಲಿ ತಪ್ಪಾಗಿ ನಮೂದಿಸಿದರೆ ಇದನ್ನು ಒಮ್ಮೆ ಮಾತ್ರ ಸರಿಪಡಿಸಲಾಗುವುದು. ಅದು ಇದಕ್ಕಾಗಿ ಮಾನ್ಯವಾದ ಗುರುತಿನ ದಾಖಲೆಯನ್ನು ಲಗತ್ತಿಸಬೇಕು. ಇನ್ನೊಮ್ಮೆ ತಪ್ಪು ತಿದ್ದಲು ನೀವು ಕೇಂದ್ರ ಕಚೇರಿಗೆ ಹೋಗುವುದು ಅವಶ್ಯಕವಾಗಿದೆ.
RELATED ARTICLES  ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಸಿಸಿಐ) ಲಿಮಿಟೇಡ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.