ಹೊನ್ನಾವರ : ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದೇಶ ಶೆಟ್ಟಿ ಅವರನ್ನು ಸ್ಥಾನದಿಂದ ವಜಾಗೊಳಿಸಿ ಕೆ.ಪಿ.ಸಿಸಿ. ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿಲಲ್ ಪ್ರಭು ಆದೇಶ ಹೊರಡಿಸಿದ್ದಾರೆ. ಕುಮಟಾ ಕ್ಷೇತ್ರದ ಪಕ್ಷದ ಟಿಕೇಟ್ ಹಂಚಿಕೆಯ ಸಂಬಂಧ ನಡೆದ ಘಟನಾವಳಿಯಲ್ಲಿ ಪಕ್ಷದ ನಿಷ್ಠಾವಂತ ಸ್ಥಳೀಯ ಕಾರ್ಯಕರ್ತರಿಗೆ ಏಕೇಟ್ ನೀಡಬೇಕು. ಪಕ್ಷದ ನಿಯಮಾನುಸಾರ 2 ಲಕ್ಷ ಮುಂಗಡ ಹಣ ನೀಡಿ ಅರ್ಜಿ ಹಾಕಿದವರಿಗೇ ಪಕ್ಷದ ಟಿಕೇಟ್ ನೀಡುವಂತೆ ಸಾಮಾಜಿಕ ಜಾಲತಾಣ ಮತ್ತು ಪತ್ರಿಕಾಗೋಷ್ಠಿಯ ಮೂಲಕ ಅವರು ಕಾರ್ಯಕರ್ತರನ್ನೊಡಗೂಡಿ ಒತ್ತಾಯಿಸಿದ್ದರು.

ಇದನ್ನು ಗಂಭೀರವಾಲ ಪರಿಗಣಿಸಿ ಈ ನಿರ್ಧಾರ ಕೈಗೊಂಡಿದೆ ಎನ್ನುವ ಅಭಿಪ್ರಾಯ ಪಕ್ಷದ ಕಾರ್ಯಕರ್ತರಿಂದ ಕೇಳಿ ಬರುತ್ತಿದ್ದು, ಈ ಘಟನೆಗೆ ಯುವಕರು ಪಕ್ಷದ ವಿರುದ್ಧ ಬಹಿರಂಗವಾಗಿ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷದತ್ತ ಯುವ ಕಾರ್ಯಕರ್ತರ ಬೆಂಬಲ ಇತರೆ ಪಕ್ಷಗಳಿಗೆ ಹೋಲಿಸಿದರೆ ಕಡಿಮೆ ಇದ್ದು, ಈ ಮಧ್ಯೆ ಇಂತಹ ಘಟನೆಯಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ.

RELATED ARTICLES  ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠದಿಂದ ರಾಘವೇಂದ್ರ ಭಟ್ಟ ಕ್ಯಾದಗಿ ಇವರಿಗೆ ಪಿ.ಹೆಚ್.ಡಿ. ಪ್ರದಾನ

ಸಂದೇಶ ಶೆಟ್ಟಿ ಯೂಥ್ ಕಾಂಗ್ರೇಸ್ ಅಧ್ಯಕ್ಷರಾದ ಬಳಿಕ ಯುವಕರನ್ನು ಒಗ್ಗೂಡಿಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದರು. ಹೊನ್ನಾವರ ಪಟ್ಟಣ, ಮುಗ್ವಾ ಹೊಸಾಕುಳಿ, ಸಾಲ್ಗೊಡ್, ಕರ್ಕಿ, ಹಳದೀಪುರ, ಚಂದಾವರ, ಕಡತೋಕಾ, ಕಡ್ಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸುತ್ತಾ ಪಕ್ಷ ಬಲವರ್ಧನೆಗೊಳಿಸಿದ್ದರು. ಈಭಾಗದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೊತ್ಸಾಹಿಸುವ ಜೊತೆ ಪಕ್ಷದ ಮುಖಂಡರಾದ ಶಿವಾನಂದ ಹೆಗಡೆ, ಮಂಜುನಾಥ ನಾಯ್ಡ, ರವಿಕುಮಾರ ಶೆಟ್ಟಿ, ಅಕ್ಷಯ ನಾಯ್ಕ ಇವರನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಲು ಪ್ರೇರೆಪಿಸುತ್ತಾ ಬಂದ ಕಾರಣ ಯುವ ಪಡೆ ಇವರ ಬೆನ್ನಿಗೆ ನಿಂತಿದೆ.

RELATED ARTICLES  ಹಳದೀಪುರದಲ್ಲಿ ಮೀನು ಮಾರುಕಟ್ಟೆ ಉದ್ಘಾಟಿಸಿದ ದೇಶಪಾಂಡೆ

ಇದಲ್ಲದೇ ಬೆಲೆ ಏಲಕೆಯ ವಿರುದ್ಧ ಪಕ್ಷದ ಯುವ ಕಾರ್ಯಕರ್ತರ ಒಗ್ಗೂಡಿಸಿ ಪ್ರತಿಭಟಿಸುವ ಜೊತೆ ಪಕ್ಷದ ಕಾರ್ಯಕ್ರಮವಾದ ಭಾರತ ಜೋಡೊ, ಸಿದ್ದರಾಮಯ್ಯ ಉತ್ಸವ, ಜನಜಾಗೃತಿ ಸಭೆ, ಬೂತ್ ಮಟ್ಟದ ಸಭೆಯಲ್ಲಿ ಹೆಚ್ಚಿನ ಯುವಕರನ್ನು ಕರೆತರುವ ಮೂಲಕ ಪಕ್ಷದ ಕಾರ್ಯಕ್ರಮ ಅನುಷ್ಠಾನದಲ್ಲಿಯೂ ಪ್ರಮುಖ ಪಾತ್ರ
ವಹಿಸಿದ್ದರು. ಚುನಾವಣೆ ಸಮಯದಲ್ಲಿ ಪಕ್ಷದ ಈ ನಿರ್ಧಾರದಿಂದ ಯುವ ಕಾರ್ಯಕರ್ತರ ಮತಗಳು ಅನ್ಯ ಪಕ್ಷದ ಕಡೆ ಪಾಲಾಗುದರಲ್ಲಿ ಅನುಮಾನವಿಲ್ಲ.