ಕುಮಟಾ : ತಾಲೂಕಿನ ಕ್ರೈಂಮ್ ಬ್ರಾಂಚ್ ನ ಪಿಎಸ್ಐ ಆಗಿದ್ದ ಚಂದ್ರಮತಿ ಪಟಗಾರ ಕೊನೆಯುಸಿರೆಳೆದಿದ್ದಾರೆ. ಮೂಲತಃ ಕಾಗಾಲ ದವರಾದ ಇವರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿ ಹುಟ್ಟಿದ ಊರಾದ ಕುಮಟಾದಲ್ಲಿ ಸೇವೆ ಸಲ್ಲಿಸುತ್ತಿದ್ದರು.

RELATED ARTICLES  ಅರಣ್ಯ ವ್ಯಾಪ್ತಿಯ ಅಡ್ಕಾರಿನಲ್ಲಿ ಅರಣ್ಯ ಇಲಾಖೆ ವತಿಯಿಂದ ತರಬೇತಿ ಭವನ ಉದ್ಘಾಟನೆ.

ಕಳೆದ ಕೆಲವು ತಿಂಗಳುಗಳಿಂದ ಅತಿಯಾದ ರಕ್ತದ ಒತ್ತಡ ಪರಿಣಾಮ ಕೋಮಾ ಸ್ಥಿತಿ ಗೆ ಜಾರಿದ್ದರು. ಸಮಾಜ ಮತ್ತು ತಾಲೂಕಿನ ಜನಗಳ ಬಗ್ಗೆ ಅಪಾರ ಕಾಳಜಿ, ಪ್ರೀತಿಯನ್ನು ಹೊಂದಿದ್ದ ಇವರ ಅಗಲುವಿಕೆ, ಸಮಾಜಕ್ಕೆ ಮತ್ತು ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ನೋವುಂಟು ಮಾಡಿದೆ.

RELATED ARTICLES  ಸುಸಂಸ್ಕೃತನ ಮೊದಲ ಲಕ್ಷಣ..

ಅವರು ಪುತ್ರ, ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದು, ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹಿತೈಶಿಗಳು ಪ್ರಾರ್ಥಿಸಿದ್ದಾರೆ.