ಕಾರವಾರ : ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೊನೆಗೂ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಇಂದಿನಿಂದ ಕ್ಷೇತ್ರದಲ್ಲಿ ಸಂಚರಿಸಿ ಪ್ರಚಾರದಲ್ಲಿ ತೊಡಗಿದ್ದು ಕಾರವಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾದಂತಾಗಿದೆ. ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ, ಕಾಂಗ್ರೆಸ್ ಸೇರುತ್ತೇನೆ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದರು. ಆದರೆ ಇನ್ನೂ ಕಾಂಗ್ರೆಸ್ ಸೇರದೇ ಪ್ರಚಾರ ಕಾರ್ಯಕ್ಕೆ ಇಳಿದು ಕಾರವಾರ ಅಂಕೋಲಾ ತಾಲೂಕಿನಲ್ಲಿ ಮುಖಂಡರ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ಕೆ ಇಳಿದಿದ್ದಾರೆ.

RELATED ARTICLES  ಎರಡು ತಲೆಗಳಿರುವ ಕರು ಜನನ

ಮೂಲಗಳ ಪ್ರಕಾರ ಬೆಂಬಲಿಗರು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದರೆ ಕಣಕ್ಕೆ ಇಳಿಯಲು ಆನಂದ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಪಕ್ಷೇತರ ಅಥವಾ ಜೆಡಿಎಸ್ ನಿಂದ ಕಣಕ್ಕೆ‌ ಇಳಿದರೆ ಸಾಧ್ಯಾಸಾಧ್ಯತೆ ಬಗ್ಗೆ ಮುಖಂಡರ ಜೊತೆ ಚರ್ಚೆ ನಡೆಸಿ ಬೆಂಬಲಿಗರು ಬೆಂಬಲಿಸಲು ತಿಳಿಸಿದರೆ ನಾಮಪತ್ರ ಸಲ್ಲಿಸಲು ಆನಂದ್ ಸಿದ್ದತೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

RELATED ARTICLES  ಪ್ರಯಾಣದಲ್ಲಿ ವಾಂತಿ ಸಮಸ್ಯೆ : ಇಲ್ಲಿದೆ ಸರಳ ಪರಿಹಾರಗಳು

ಇನ್ನೊಂದೆಡೆ ಕಾಂಗ್ರೆಸ್ ಸೇರಿ ಅಭ್ಯರ್ಥಿ ಸತೀಶ್ ಸೈಲ್ ಗೆ ಬೆಂಬಲಿಸಿದರೇ ಹೇಗೆ ಎನ್ನುವ ಚರ್ಚೆಯನ್ನು ಮುಖಂಡರ ಬಳಿ ಮಾಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಚೈತ್ರಾ ಕೊಠಾರಕರ್ ಮನೆಗೆ ಆನಂದ್ ಭೇಟಿ ನೀಡಿ ಚರ್ಚೆ ನಡೆಸಿದ್ದು ಇಂದು ಕಾರವಾರ ಹಾಗೂ ನಾಳೆ ಅಂಕೋಲಾದಲ್ಲಿ ಆನಂದ್ ಓಡಾಟ ನಡೆಸಲಿದ್ದಾರೆ ಎನ್ನಲಾಗಿದೆ.