ಕುಮಟಾ : ಬಿ.ಇಡಿ ಅಂತಿಮ ವರ್ಷದ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದಲ್ಲಿ ಓದಿದ್ದ ಒಡಹುಟ್ಟಿದವರು ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಕಾಗಾಲಿನ ನಿಧಿ ಉಮೇಶ ದೇಶಭಂಡಾರಿ ಪ್ರಥಮ ಸ್ಥಾನ ಪಡೆದರೆ ಸಹೋದರ ನಿನಾದ ಉಮೇಶ ದೇಶ ಭಂಡಾರಿ ದ್ವಿತೀಯ ಸ್ಥಾನ ಪಡೆದು ಸಾಧಕರ ಪಟ್ಟಿಯಲ್ಲಿ ಹೆಸರು ನಮೂದಿಸಿದ್ದಾರೆ.

ಎಂ.ಎಸ್ಸಿಯಲ್ಲಿ ರ್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದ ನಿಧಿ ಉಮೇಶ ದೇಶ ಭಂಡಾರಿ
ಬಳಿಕ ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದಿದ್ದಳು, ಅವಳ ಸಹೋದರ ನಿನಾದ ಉಮೇಶ ದೇಶಭಂಡಾರಿ ಬಿಎಸ್ಸಿ ಪದವಿಮುಗಿಸಿ ಅದೇ ಕಾಲೇಜಿನಲ್ಲಿ ಬಿ.ಇಡಿ ಶಿಕ್ಷಣಕ್ಕೆ ಸೇರ್ಪಡೆಯಾಗಿ ಶಿಕ್ಷಣದಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ಮಾಡುತ್ತ ಉತ್ತಮ ಶ್ರೇಣಿಯಲ್ಲಿ ಪ್ರತೀ ಸೆಮ್ ನಲ್ಲೂ ವಿಶೇಷ ಸಾಧನೆ ಮಾಡುತ್ತಾ ಬಂದಿದ್ದರು.

RELATED ARTICLES  ಕುಮಟಾದಲ್ಲಿ ದುಶ್ಚಟದ ವಿರುದ್ಧ ಜಿಲ್ಲಾ ಮಟ್ಟದ ಬೃಹತ್ ಜನಜಾಗೃತಿ ಜಾಥಾ ಸಂಪನ್ನ.

ಅಂತಿಮ ಕ್ರೂಢೀಕೃತ ಫಲಿತಾಶದಲ್ಲಿ ನಿಧಿ ಶೇಕಡಾ 92.71.ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ ನಿನಾದ ಶೇಖಡಾ 92.46 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಕುಮಟಾ ತಾಲೂಕಿನ ಕಾಗಾಲ ಗ್ರಾಮದ ಲೋಕೇಶ್ವರ ವಾರ್ಡಿನ ನಿವಾಸಿಗಳಾದ ದಿ.ಉಮೇಶ ಎನ್ ದೇಶಭಂಡಾರಿ ಹಾಗೂ ಹೇಮಾವತಿ ದೇಶಭಂಡಾರಿ ದಂಪತಿಗಳ ಉಭಯ ಮಕ್ಕಳಾದ ನಿಧಿ ಮತ್ತು ನಿನಾದ ಬಾಲ್ಯದಿಂದಲೂ ಪ್ರತಿಭಾವಂತರು.

RELATED ARTICLES  ಗೇರುಸೊಪ್ಪಾ ಬಳಿ ಕಂದಕಕ್ಕೆ ಉರುಳಿದ ಲಾರಿ : ಓರ್ವನ ಸಾವು

ನಿಧಿ ಭಾಷಣ ,ನಾಟಕ ,ಬರೆಹ ಮೊದಲಾದ ಹವ್ಯಾಸವನ್ನು ಒಳಗೊಂಡಿದ್ದು ಇತ್ತೀಚೆಗೆ ಪಂಚಾಯತ ಚುನಾವಣೆಗೂ ಸ್ಪರ್ಧಿಸಿ ಗೆಲವು ಸಾಧಿಸಿದ್ದಳು. ಈಕೆಯ ತಮ್ಮ ನಿನಾದ ಕೂಡ ಚಿತ್ರಕಲೆ,ಗಿಟಾರ್ ವಾದನ ,ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ಅಭಿರುಚಿಯನ್ನು ಹೊಂದಿರುವವನು. ಇತ್ತೀಚೆಗೆ ನಡೆದ CTET ಪರೀಕ್ಷೆಯಲ್ಲಿ ಹಾಗೂ TET ಪರೀಕ್ಷೆಯಲ್ಲಿಯೂ ಕೂಡ ಈ ಇಬ್ಬರೂ ಅತ್ಯಧಿಕ ಅಂಕ ಪಡೆದು ಜೇಷ್ಠತಾ ಪಟ್ಟಿಯಲ್ಲಿ ಕಾಣಿಸಿಕೊಂಡವರು.

ಇವರ ಈ ಸಾಧನೆಗೆ ಕುಟುಂಬದ ಸದಸ್ಯರು ಹಾಗೂ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.