ಬೆಂಗಳೂರು : ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1.47 ಕೋಟಿ ರೂ. ಮೌಲ್ಯದ 8.30 ಕಿಗ್ರಾಂ ತೂಕದ ಚಿನ್ನ ಲೇಪಿತ ಆಭರಣಗಳನ್ನು ಹಲಸೂರು ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿ.ವಿ.ರಾಮನ್‍ನಗರ ವಿಧಾನಸಭಾ ಕ್ಷೇತ್ರದ ಹಲಸೂರು ಲೇಕ್ ಚೆಕ್‍ಪೋಸ್ಟ್‌ನಲ್ಲಿ ಸೋಮವಾರ ಸಂಜೆ ವಾಹನ ತಪಾಸಣೆ ಮಾಡುತ್ತಿದ್ದಾಗ ಈ ಅದರಲ್ಲಿದ್ದ ಕಬ್ಬಿಣದ ಟ್ರಂಕ್‍ನಲ್ಲಿ ಚಿನ್ನದ ಲೇಪಿತ ಆಭರಣಗಳು ಪತ್ತೆಯಾಗಿವೆ. ಈ ಆಭರಣಗಳಿಗೆ ಯಾವುದೇ ದಾಖಲೆ ಇಲ್ಲದ ಕಾರಣ ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 1.47 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಚಾಲಕ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಈ ಚಿನ್ನ ಲೇಪಿತ ಆಭರಣಗಳನ್ನು ಮತದಾರರಿಗೆ ಹಂಚಲು ಕೊಂಡೊಯ್ಯಲಾಗುತ್ತಿತ್ತೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕಾಂಗ್ರೆಸ್ ಉಗ್ರರು ಹಾಗೂ ದೇಶಭಕ್ತರನ್ನು ಒಂದೇ ರೀತಿ ನೋಡುತ್ತಿದೆ.