ಹೊನ್ನಾವರ: ಕೃಷಿ ಬೆಳೆ ಸರಿಯಾಗಿ ಬರದೇ ಇದ್ದುದರಿಂದ ತಾಲೂಕಿನ ಅನಂತವಾಡಿಯ ಜಡ್ಡಿಯಲ್ಲಿ ರೈತನೋರ್ವ ಮನನೊಂದು ಮನೆಯಲ್ಲಿದ್ದ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮ ನಾಯ್ಕ(72) ಮೃತ ರೈತ. ಅನಂತವಾಡಿಯಲ್ಲಿರುವ ಸರ್ವೆ ನಂ. 488/2ರಲ್ಲಿ 2 ಎಕರೆ 5 ಗುಂಟೆ ಆಗುವಷ್ಟು ಜಮೀನು ಇದ್ದು, ಆ ಜಮೀನಿನಲ್ಲಿ ಶೆಂಗಾ ಮತ್ತು ಭತ್ತವನ್ನು ಬೆಳೆಯುತ್ತಿದ್ದರು. ಮಂಕಿಯ ವಿ.ಎಸ್.ಎಸ್ ಸೊಸೈಟಿಯಲ್ಲಿ ಕೃಷಿಗಾಗಿ 1 ಲಕ್ಷ ರೂಪಾಯಿ ಬೆಳೆ ಸಾಲ ಮಾಡಿದ್ದರು. ಬ್ಯಾಂಕ್ ಸಾಲ ತುಂಬಬೇಕು ಎಂದು ಮನೆಯಲ್ಲಿ ಹೇಳಿಕೊಂಡು ಉದ್ವೇಗಕ್ಕೊಳಗಾಗಿದ್ದರು ಎನ್ನಲಾಗಿದೆ.

RELATED ARTICLES  ವಂದೂರು ವ್ಯವಸಾಯ ಸಹಕಾರಿ ಸಂಘದ ನೂತನ ವಿಸ್ತರಣಾ ಕಟ್ಟಡ ಲೋಕಾರ್ಪಣೆ

ಈ ವರ್ಷ ಕೃಷಿ ಬೆಳೆ ಸರಿಯಾಗಿ ಬರದೆ ಇದ್ದರಿಂದ ಮಾ.27ರಂದು ಸಂಜೆ 5 ಗಂಟೆ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲವಾಗಿದ್ದನ್ನು ನೋಡಿ ವಿಷ ಸೇವಿಸಿದ್ದರು. ಅಸ್ವಸ್ಥನಾದವರಿಗೆ ಚಿಕಿತ್ಸೆಗೆ ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಉಪಚಾರ ಫಲಕಾರಿಯಾಗದೆ ಏ.3ರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತನ ಮಗ ಸೋಮೇಶ್ವರ ನಾಯ್ಕ ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES  ಮಾಜಿ ಶಾಸಕ ‌ದಿನಕರ‌ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಕಾರ್ಯಕರ್ತರು.