ಚುನಾವಣೆ ಸಮೀಪ ಬಂದಂತೆ ಹಣಕಾಸಿನ ತಪಾಸಣೆ ಹೆಚ್ಚಿದ್ದು, ಅಧಿಕೃತ ದಾಖಲೆ ಇಲ್ಲದ ಹಣ ಜಪ್ತಿ ಮಾಡಲಾಗ್ತಿದೆ. ಎರಡು ಲಕ್ಷ ಹಣ ವಶಕ್ಕೆ ಪಡೆದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ದಾಖಲೆ ಇಲ್ಲದೇ ಬೈಕ್ ನಲ್ಲಿ ಎರಡು ಲಕ್ಷ ಹಣ ಕೊಂಡೊಯ್ಯುತ್ತಿರುವಾಗ ತಪಾಸಣೆ ವೇಳೆ ಪತ್ತೆಯಾಗಿದ್ದು ,ಇಬ್ರಾಹಿಂ ಅಬ್ದುಲ್ ರಜಾಕ್ ಎಂಬುವವರಿಗೆ ಸೇರಿದ 2 ಲಕ್ಷ ಹಣ ಇದಾಗಿದೆ. ಸಮರ್ಪಕ ದಾಖಲೆ ನೀಡದ ಹಿನ್ನಲೆಯಲ್ಲಿ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಪಾರ ಪ್ರಮಾಣದ ಪೆನ್ನಿ ವಶ
ಮನೆಯ ಮೇಲೆ ಅಬಕಾರಿ ಪೊಲೀಸರ ದಾಳಿ ನಡೆಸಿ ಮನೆಯಲ್ಲಿ ಅಡಗಿಸಿಟ್ಟಿದ್ದ ಮದ್ಯ ವಶಕ್ಕೆ ಪಡೆದು ಆರೋಪಿಗಳು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡ ಗ್ರಾಮದ ತರಂಗಮೇಟದ ಹರಿಕಂತ್ರವಾಡದಲ್ಲಿ ನಡೆದಿದೆ. ಶ್ವೇತಾ ಆನಂದ್ ಹರಿಕಂತ್ರ ಎಂಬುವವರ ಮನೆ ಇದಾಗಿದ್ದು ದಾಳಿ ವೇಳೆ ಪರಾರಿಯಾಗಿದ್ದಾರೆ.
ಒಟ್ಟು 3,22,000 ಮೌಲ್ಯದ 324,000 ಲೀಟರ್ ಗೋವಾ ಪೆನ್ನಿ, 280,000 ಲೀಟರ್ ಗೇರು ಹಣ್ಣಿನಿಂದ ತಯಾರಾದ ಪೆನ್ನಿ ವಶಕ್ಕೆ ಪಡೆಯಲಾಗಿದ್ದು ಅಂಕೋಲ ಅಬಕಾರಿನಿರೀಕ್ಷಕ ರಾಹುಲ್ ಎಂ ನಾಯ್ಕ ಮಾರ್ಗದರ್ಶನದಲ್ಲಿ ಪ್ರಶಿಕ್ಷಣಾರ್ಥಿ ಉಪನಿರೀಕ್ಷಕಿ ಮಧುರ ದಾಸ್,ಸಿಬ್ಬಂದಿಗಳಾದ ಈರಣ್ಣ ಶ್ರೀಶೈಲ ಹಡಪದ,ರವಿ,ಗಿರೀಶ್ ಮುಂತಾದವರು ಭಾಗವಹಿಸಿದ್ದರು. ಘಟನೆ ಸಂಬಂಧ ಅಂಕೋಲ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.