ಹೊನ್ನಾವರ : ತಾಲೂಕಿನ ಬೈಲ್ ಗದ್ದೆ ಎಂಬಲ್ಲಿ ಯಾವುದೋ ವಿಚಾರಕ್ಕೆ ಪತಿ ಹಾಗೂ ಪತ್ನಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಘಟನೆಯಲ್ಲಿ ವೆಂಕ್ಟ ತಿಮ್ಮಪ್ಪ ನಾಯ್ಕ ಹಾಗೂ ಗೋಪಿ ನಾಯ್ಕ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು, ಮನೆಯಲ್ಲಿ ಯಾರು ಇಲ್ಲದ ವೇಳೆ ಅಡಿಗೆ ಕೋಣೆಯ ಜಂತಿಗೆ ಇಬ್ಬರೂ ಒಟ್ಟಿಗೆ ಸೇರಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಮನೆಯಿಂದ ಹೊರಗಡೆ ಹೋದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದುವರೆಗೆ ಪತಿ-ಪತ್ನಿ ನೇಣು
ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

RELATED ARTICLES  'ಪವರ್ ಸ್ಟಾರ್'ಗಾಗಿ ಬಂದ ಪ್ರಿಯಾಂಕ..!