ಯಲ್ಲಾಪುರ : ಹೆಸ್ಕಾಂನಲ್ಲಿ ಹಂಗಾಮಿ ಕೆಲಸಗಾರನಾಗಿದ್ದ, ಹೆಸ್ಕಾಂ ಗ್ರಿಡ್‌ನಲ್ಲಿಯೂ ಕೆಲಸ ಮಾಡಿದ್ದ, ನಂತರ ಸೂಪರ್ ಮಾರ್ಟ್ನಲ್ಲಿ ಇತ್ತೀಚೆಗೆ ಆಟೋ ಮೊಬೈಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ, ಮನೆಯಲ್ಲಿ ಉಂಟಾದ ಮನಸ್ಥಾಪದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪಟ್ಟಣದ ನೂತನನಗರ ಜಡ್ಡಿಯಲ್ಲಿ ಗಂಡ-ಹೆಂಡತಿಯ ಮಧ್ಯೆ ಸಾಲ ತುಂಬುವ ವಿಷಯಕ್ಕೆ ಸಂಬಂಧಪಟ್ಟಂತೆ ಜಗಳ ನಡೆದು, ಗಂಡ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ನಡೆದಿದ್ದು, ನೂತನನಗರ ಜಡ್ಡಿ ನಿವಾಸಿವಿನಾಯಕ ಅಮಾಸಿ (37) ಎಂಬಾತ ಮೃತ ದುರ್ದೈವಿ. ಮೃತನಿಗೆ ಒಂದು ಮಗು ಕೂಡಾ ಇದೆ.

RELATED ARTICLES  ಅಯ್ಯೋ..! ಎಳೆಯ ಶಿಶುವನ್ನು ಬಿಟ್ಟುಹೋದರು.

ಈತ ನೂತನನಗರ ಜಡ್ಡಿಯ ಬಾಡಿಗೆಗೆ ಇದ್ದ ಮನೆಯ ಅಡುಗೆ ಕೋಣೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮೃತನ ಪತ್ನಿ ವೈಶಾಲಿ ವಿನಾಯಕ ಅಮಾಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾಳೆ. ಪೊಲೀಸ್ ನಿರೀಕ್ಷಕ ರಂಗನಾಥ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ರವಿ ಗುಡ್ಡಿ ತನಿಖೆ ಕೈಗೊಂಡಿದ್ದಾರೆ.

RELATED ARTICLES  ಸಿವಿಲ್ ಡಿಪ್ಲೊಮಾದಲ್ಲಿ ರಾಜ್ಯಕ್ಕೆಟಾಪರ್ ಆದ 71ರ ಹಿರಿಯ ನಾರಾಯಣ ಭಟ್ಟ.