ಭಟ್ಕಳ: ಸಂಗೀತವನ್ನು ಹೃದಯದಿಂದ ಆಲೀಸಬೇಕೆ ಹೊರತು ಕಿವಿಯಿಂದ ಅಲ್ಲ. ನಮ್ಮೋಳಗೆ ಮನುಷ್ಯತ್ವವನ್ನು ತುಂಬುವ ಶಕ್ತಿ ಸಂಗೀತಕ್ಕೆ ಇದೆ. ಈ ನಿಟ್ಟಿನಲ್ಲಿ ನಿನಾದದ ಸಂಘಟನೆ ಸಾಹಿತ್ಯ ಸಂಗೀತ ಪರಿಚಾರಿಕೆಯ ಕೆಲಸವನ್ನು ವೃತದಂತೆ ಮಾಡುತ್ತಿರುವುದು ಪ್ರಸಂಶನೀಯ ಎಂದು ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಅವರು ಅಭಿಪ್ರಾಯ ಪಟ್ಟರು.

ತಾಲೂಕಿನ ಚಿತ್ರಾಪುರದಲ್ಲಿ ಶನಿವಾರ ನಡೆದ ನಿನಾದ ಸಾಹಿತ್ಯ ಸಂಗೀತ ಸಂಚಯ ಸಂಘಟನೆ ಹಮ್ಮಿಕೊಂಡ ದಸರಾ ಕಾವ್ಯೋತ್ಸವವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದ ಅವರು ನಿರ್ಮಲ ಪ್ರೀತಿಯಲ್ಲಿ ಯಾವ ಕಾರಣಕ್ಕೂ ಕಹಿ ಇರಲು ಸಾಧ್ಯವಿಲ್ಲ ಅಂತಹ ಪ್ರೀತಿಯನ್ನು ನಮ್ಮದಾಗಿಸಿಕೊಳ್ಳಲು ಸಂಸ್ಕಾರ ಕೂಡ ಅಗತ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಕಾವ್ಯ ಮತ್ತು ಸಂಗೀತ ಯಾವತ್ತೂ ಬತ್ತದ ಎರಡು ಮಹಾ ನದಿಗಳಿದ್ದಂತೆ. ಅವೆರಡು ಸೂರ್ಯ ಚಂದ್ರರಿರುವರೆಗೆ ಯಾವತ್ತೂ ಅಜರಾಮರವಾಗಿರುತ್ತದೆ. ಇಂದು ಸಾಹಿತ್ಯ ಮತ್ತು ಸಂಗೀತಕ್ಕೆ ಕೆಲ ದುಷ್ಟ ಶಕ್ತಿಗಳು ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಆದರೆ ಅದು ಕೆವಲ ಭ್ರಮೆಯಾಗಿರುತ್ತದೆಯೇ ಹೊರತು ವಾಸ್ತವ ನೆಲೆಗೆ ದಕ್ಕುವುದಿಲ್ಲ ಎಂದರು. ನಿನಾದ ಸಂಗಟನೆ ಎಲ್ಲರ ಅಸ್ತಿ ಅದು ಯಾವ ಕಾರಣÀಕ್ಕಾಗಿಯೂ ಒಬ್ಬರ ಆಸ್ತಿಯಾಗಿರುವುದಿಲ್ಲ. ಸಾಹಿತ್ಯ ಮತ್ತು ಸಂಗೀತ ಪರಂಪರೆಯನ್ನು ಮುನ್ನಡೆಸಲು ಈ ಸಂಘಟನೆ ಸದಾ ಕಳಕಳಿಯಿಂದ ದುಡಿಯಲಿ, ಇಂತಹ ಸೃದ್ಧಾ ಪೂರ್ವಕ ಸಂಘಟನೆಗೆ ಹಲವು ಕೈಗಳ ನೆರವು ಬೇಕಾಗಿದೆ ಇದು ಎಲ್ಲರ ಜವಾಬ್ದಾರಿಯಾಗಲಿ ಎಂದರು.

RELATED ARTICLES  ಒಮ್ಮಿಂದೊಮ್ಮೆಲೇ ಎರಗಿ ಬರುವ ಕಾಡು ಹಂದಿಗಳು : ಕಂಗಾಲಾಗಿದ್ದಾರೆ ಜನರು : ಗಮನ ವಹಿಸಬೇಕಿದೆ ಅಧಿಕಾರಿಗಳು.

ಇನ್ನೊರ್ವ ಅತಿಥಿಯಾದ ಸಾಹಿತಿ ಅಮೃತ ಬಿ. ರಾಮರಥ್ ಮಾತನಾಡಿ ನಿನಾದ ಸಂಘಟನೆ ಹಮ್ಮಕೊಂಡ ಇಂತಹ ಸೃಜನಶೀಲ ಕಾರ್ಯಕ್ರಮಗಳು ಒಂದು ಕಾಲಘಟ್ಟದ ಸಾಕ್ಷಿಯಾಗಿ ನಿಲ್ಲುತ್ತದೆ ಎಂದರು. ನಿನಾದ ಸಂಘಟನೆ ಜೊತೆಗೂಡಿ ತಾವು ಇಂತಹ ಮೌಲ್ಯಯುತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.
IMG 20171007 WA0328

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ.ಪಿ.ಶಿವಾನಂದ ರವ್ ದಸರಾ ಕಾವ್ಯೋತ್ಸವವನ್ನು ವಿಶಿಷ್ಟವಾಗಿ ಹಮ್ಮಿಕೊಳ್ಳುವ ಮೂಲಕ ನಾಡಿನ ಸಂಸ್ಕøತಿಗೆ ನಿನಾದ ಸಂಘಟನೆ ತನ್ನ ಮಿತಿಯಲ್ಲಿ ಕೊಡುಗೆ ನೀಡುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಕೇವಲ ಆರ್ಥಿಕ ಬೆಂಬಲ ಮಾತ್ರವಲ್ಲ ಸಮುದಾಯದ ಇಛ್ಚಾಶಕ್ತಿಯ ಬೆಂಬಲವು ಬೇಕಾಗುತ್ತದೆ ಎಂದರು. ಭಾವಕವಿ ಗಾಯಕ ಉಮೇಶ ಮುಂಡಳ್ಳಿ ಪ್ರಾಸ್ಥಾವಿಕ ಮಾತನಾಡಿದರು.ಶಿರಾಲಿ ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ 20ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಮಾಸ್ಕೇರಿ ಎಂ.ಕೆ.ನಾಯಕ ಅವರನ್ನು ನಿನಾದ ಸಂಘಟನೆಯಿಂದ ಗೌರವಯುತವಾಗಿ ಸನ್ಮಾನಿಸಲಾಯಿತು.

RELATED ARTICLES  ಸೂರಜ್ ನಾಯ್ಕ ಸೋನಿಯವರಿಂದ ಅಬ್ಬರದ ಪ್ರಚಾರ: ಎಲ್ಲೆಡೆ ಸಿಕ್ಕಿದೆ ಉತ್ತಮ ಸ್ಪಂದನೆ.

ಈ ಸಂದರ್ಭದಲ್ಲಿ ಹಮ್ಮಿಕೊಂಡ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ಸ್ವರ್ಧೆಯಲ್ಲಿ ವಿಜೇತರಾದ ಅಶ್ವಿನಿ ಕೋಡಿಬೈಲ್ ಸುಳ್ಯ, ಸಾವಿತ್ರಿ ನಾಯಕ ಕುಮಟ ಅವರೊಂದಿಗೆ ಹಿರಿಯ ಕವಿ ಎಂ.ಡಿ.ಪಕ್ಕಿ, ಮಾಸ್ಕೇರಿ ನಾಯಕ ಮೊದಲಾದವರು ತಮ್ಮ ಕವಿತೆ ವಾಚಿಸಿದರು. ಈ ಸಂದರ್ಭದಲ್ಲಿ ಸಾಹಿತಿ ಶಂಕರ ಮುಂಗರವಾಡಿ ದಾಂಡೇಲಿ, ಲೇಖಕಿ ರಾಜಮ್ಮ ಹಿಚ್ಕಡ್, ಭಾರತಿ ನಾಯಕ ಮುಂಬಯಿ ಮೊದಲಾದ ಗಣ್ಯರು ಹಾಜರಿದ್ದರು.

ಸಭಾ ಕಾರ್ಯಕ್ರಮದ ಜೊತೆ ಜೊತೆಗೆ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿಯವರ ನಿನಾದ ತಂಡದಿಂದ ನಡೆದ ಸುಗಮ ಸಂಗೀತ ಗಾಯನ ಎಲ್ಲರ ಮನಸೂರೆಗೊಂಡಿತು. ಉಮೇಶ ಮುಂಡಳ್ಳಿ ತಮ್ಮ ಸ್ವರಚಿತ ಭಾವಗೀತೆಗಳ ಜೊತೆಗೆ, ಅರವಿಂದ ಕರ್ಕಿಕೋಡಿ ಮತ್ತು ಮಾಸ್ಕೇರಿ ಎಂ.ಕೆ.ನಾಯಕರ ಗೀತೆಗಳನ್ನು ಹಾಡಿದರೆ. ಸಹಗಾಯಕಿಯರಾದ ಪ್ರತೀಕ್ಷಾ ಕಡ್ಲೆ, ತನುಜಾ ನಾಯ್ಕ, ಶ್ರೇಯಾ ಹೆಬ್ಬಾರ, ಅರ್ಚನಾ ಹೆಬ್ಬಾರರವರು ನಾಡಿನ ಹಿರಿಯ ಕವಿಗಳ ಭಾವಗೀತೆಗಳನ್ನು ಹಾಡಿದರು.

ನಿನಾದ ಸಂಚಾಲಕಿ ರೇಷ್ಮಾ ಉಮೇಶ ಸ್ವಾಗತಿಸಿದರು. ಆಶುಕವಿ ಎಂದೆ ಗುರುತಿಸಿಕೊಂಡ ಜಿಲ್ಲೆಯ ಅತ್ಯುತ್ತಮ ನಿರೂಪಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಗೋಪಾಲ ನಾಯ್ಕ ಪ್ರಾರ್ಥಿಸಿದರು.