ಹೊನ್ನಾವರ: ಪಟ್ಟಣದ ಎಮ್ಮೆಪೈಲ್ ನಿವಾಸಿಯಾಗಿರುವ, ಹಾಲಿ ಬಿಇಒ ಆಫೀಸ್ ಹತ್ತಿರ ಮನೆಯಲ್ಲಿ ತಲ್ವಾರ್ ಪತ್ತೆಯಾಗಿದ್ದು, ಸಿಪಿಐ ಮಂಜುನಾಥ ಇ.ಒ ನೇತೃತ್ವದಲ್ಲಿ ಮಂಗಳವಾರ ದಾಳಿ ನಡೆಸಿ ಆರೋಪಿ ಸಮೇತ ಮಾರಕಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯ ಸಮಯದಲ್ಲಿ ಯಾವುದೋ ರಾಜಕೀಯ ಪಕ್ಷದ ಪರವಾಗಿ ಬೆಂಬಲಿಸಿ ಯಾವುದೋ ಕೃತ್ಯ ಎಸಗುವ, ಇಲ್ಲವೇ ಭಾಗಿಯಾಗಿ ಕೃತ್ಯವನ್ನು ಮಾಡುವ ಸಂಚನ್ನು ರೂಪಿಸುವ ಸಾಧ್ಯತೆಯಿಂದ ಹೊಂದಿದ್ದ ಎನ್ನಲಾದ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ.

RELATED ARTICLES  ಈಜಲು ಹೋಗಿ ನೀರುಪಾಲಾದ ಯುವಕ: ಮುರ್ಡೇಶ್ವರದಲ್ಲಿ ಘಟನೆ.

ಮನೆಯನ್ನು ಶೋಧನೆ ಮಾಡುವ ಕುರಿತು ನ್ಯಾಯಾಲಯದಿಂದ ಶೋಧನಾ ವಾರೆಂಟ್ಪ ಡೆದುಕೊಂಡು ಇಬ್ಬರು ಪಂಚರನ್ನು ಹಾಜರಿಟ್ಟುಕೊಂಡಿದ್ದರು. ಮಂಗಳವಾರ ಬೆಳಗ್ಗೆ ವಾರಂಟ್ ಸಮೇತ ಎರಡು ಗಂಟೆಗಳ ಮನೆಯ ಶೋಧನೆಯನ್ನು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಕೈಗೊಳ್ಳಲಾಗಿತ್ತು.


ಈ ವೇಳೆ ಮನೆಯ ಮಂಚದ ಮೇಲಿರುವ ಬೆಡ್‌ನ ಕೆಳಗೆ 2 ಫೀಟ್ 6 ಇಂಚು ಉದ್ದದ ಒಂದು ಕಡೆ ಹರಿತವಾಗಿರುವ ಕಬ್ಬಿಣದ ಲಾಂಗ್‌ನ್ನು ಇಟ್ಟುಕೊಂಡಿದ್ದು ಪತ್ತೆಯಾಗಿದೆ. ಈ ಮಾರಕಾಸ್ತ್ರದ ಬಗ್ಗೆ ವಿಚಾರಿಸಿದರೆ ಸೂಕ್ತ ಉತ್ತರ ಇರಲಿಲ್ಲ ಎನ್ನಲಾಗಿದೆ. ಮಾರಕಾಸ್ತ್ರದ ಜೊತೆಗೆ ವ್ಯಕ್ತಿ ಸಿಕ್ಕಿರುವುದರಿಂದ ವಶಕ್ಕೆ ಪಡೆದು ಕಲಂ 25(1)(ಬಿ)(ಬಿ)ಭಾರತೀಯ ಆಯುಧ ಅಧಿನಿಯಮ 1959ರಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

RELATED ARTICLES  ಗ್ರಾಮ ಪಂಚಾಯತಿಯಲ್ಲೇ ಇನ್ಮುಂದೆ ಜನನ- ಮರಣ ಪ್ರಮಾಣ ಪತ್ರ

Sorce : Euttarakannada